麦琴圣经旅程

麦琴一年读经计划

每天四处经文,一年读旧约一遍、新约和诗篇两遍。

365 一年固定读经表
4 每天四处经文
181 所选天数
‹ 第181天 / 共365天 ›
译本

读经确认

你完成了这一天的麦琴读经吗?

点击确认后,会在我的页面麦琴进度表中记录为已完成。

家庭崇拜·旧约

여호수아 2

打开经文 →
第2章

Rahab Hides the Spies

1ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಶಿಟ್ಟೀಮಿನಿಂದ ಗುಪ್ತವಾಗಿ ಕಳುಹಿಸಿ, ಅವರಿಗೆ, “ನೀವು ಹೋಗಿ ದೇಶವನ್ನೂ, ವಿಶೇಷವಾಗಿ ಯೆರಿಕೋ ಪಟ್ಟಣವನ್ನೂ ಸುತ್ತಿ ನೋಡಿರಿ,” ಎಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ವೇಶ್ಯೆಯ ಮನೆಯಲ್ಲಿ ಇಳಿದು ಅಲ್ಲಿಯೇ ಉಳಿದುಕೊಂಡರು.

2ಯೆರಿಕೋವಿನ ಅರಸನಿಗೆ, “ಇಗೋ, ಇಸ್ರಾಯೇಲರಲ್ಲಿ ಕೆಲವರು ದೇಶವನ್ನು ಗೂಢಚಾರ ಮಾಡಲು ರಾತ್ರಿಯಲ್ಲಿ ಇಲ್ಲಿಗೆ ಬಂದಿದ್ದಾರೆ,” ಎಂದು ತಿಳಿಸಲಾಯಿತು.

3ಆಗ ಯೆರಿಕೋವಿನ ಅರಸನು ರಾಹಾಬಳಿಗೆ, “ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರೆದುಕೊಂಡು ಬಾ. ಏಕೆಂದರೆ ಅವರು ದೇಶವನ್ನೆಲ್ಲಾ ಗೂಢಚಾರ ಮಾಡಲು ಬಂದಿದ್ದಾರೆ,” ಎಂದನು.

4ಆದರೆ ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು, “ನನ್ನ ಬಳಿಗೆ ಇಬ್ಬರು ಮನುಷ್ಯರು ಬಂದಿದ್ದರು. ಆದರೆ ನಾನು ಅವರನ್ನು ಯಾವ ಕಡೆಯವರೆಂದು ತಿಳಿಯದೆ ಇದ್ದೆನು.

5ಪಟ್ಟಣದ ಬಾಗಿಲು ಮುಚ್ಚುವ ಮುಸ್ಸಂಜೆ ವೇಳೆಯಲ್ಲಿ ಆ ಮನುಷ್ಯರು ಹೊರಟು ಹೋದರು. ಅವರು ಎಲ್ಲಿ ಹೋದರೋ ನಾನು ಅರಿಯೆ. ಅವರನ್ನು ಬೇಗ ಹಿಂದಟ್ಟಿರಿ. ನಿಮಗೆ ಸಿಕ್ಕುವರು,” ಎಂದಳು.

6ಆದರೆ ಆಕೆಯು ಅವರನ್ನು ಮಾಳಿಗೆಯ ಮೇಲೆ ಏರಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನೊಳಗೆ ಬಚ್ಚಿಟ್ಟಿದ್ದಳು.

7ಆ ಮನುಷ್ಯರು ಯೊರ್ದನ್ ನದಿ ದಾರಿ ಹಿಡಿದು ಹೋಗಿ ನದಿ ದಾಟುವ ಸ್ಥಳದವರೆಗೂ ಅವರನ್ನು ಹಿಂದಟ್ಟಿದರು. ಅವರನ್ನು ಹಿಂದಟ್ಟುವವರು ಹೊರಟುಹೋದ ಕೂಡಲೆ, ಪಟ್ಟಣದ ಹೆಬ್ಬಾಗಿಲು ಮುಚ್ಚಿದರು.

The Oath of Rahab and the Spies

8ಗೂಢಚಾರರು ಮಲಗುವುದಕ್ಕಿಂತ ಮುಂಚೆ ಆಕೆಯು ಮಾಳಿಗೆಯ ಮೇಲಕ್ಕೇರಿ, ಅವರ ಬಳಿಗೆ ಬಂದು,

9“ಯೆಹೋವ ದೇವರು ನಿಮಗೆ ದೇಶವನ್ನು ಕೊಟ್ಟಿದ್ದಾರೆಂದೂ, ನಿಮ್ಮ ನಿಮಿತ್ತ ನಮಗೆ ಮಹಾ ಭೀತಿಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.

10ನೀವು ಈಜಿಪ್ಟಿನಿಂದ ಹೊರಡುವಾಗ ಯೆಹೋವ ದೇವರು ಹೇಗೆ ನಿಮಗೋಸ್ಕರ ಕೆಂಪುಸಮುದ್ರದ ನೀರನ್ನು ಬತ್ತಿಹೋಗಮಾಡಿದ್ದನ್ನೂ, ನೀವು ಸಂಪೂರ್ಣ ನಿರ್ಮೂಲ ಮಾಡಿದ ಯೊರ್ದನ್ ನದಿ ಆಚೆಯಲ್ಲಿದ್ದ ಅಮೋರಿಯರ ಇಬ್ಬರು ಅರಸುಗಳಾದ ಸೀಹೋನನಿಗೂ, ಓಗನಿಗೂ ಮಾಡಿದ್ದನ್ನೂ ನಾವು ಕೇಳಿದ್ದೇವೆ.

11ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕುಂದಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ನಿಮ್ಮ ದೇವರಾದ ಯೆಹೋವ ದೇವರೇ ಮೇಲಿರುವ ಪರಲೋಕದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾರೆ.

12“ಈಗ ನೀವು ನನಗೊಂದು ಪ್ರಮಾಣಮಾಡಬೇಕು. ನಾನು ನಿಮಗೆ ದಯೆ ತೋರಿಸಿದ್ದರಿಂದ ನೀವು ನನಗೂ ನನ್ನ ತಂದೆಯ ಮನೆಗೂ ದಯೆ ತೋರಿಸಬೇಕು. ನನಗೆ ನಿಶ್ಚಯವಾದ ಗುರುತನ್ನು ಕೊಡಬೇಕು.

13ನನ್ನ ತಂದೆಯನ್ನೂ ನನ್ನ ತಾಯಿಯನ್ನೂ, ನನ್ನ ಸಹೋದರರನ್ನೂ ನನ್ನ ಸಹೋದರಿಯರನ್ನೂ, ಅವರಲ್ಲಿರುವ ಎಲ್ಲರನ್ನೂ ಜೀವದಿಂದಿರಿಸಿ, ನಮ್ಮ ಪ್ರಾಣವನ್ನು ಸಾವಿನಿಂದ ತಪ್ಪಿಸಬೇಕು ಎಂದು ಯೆಹೋವ ದೇವರ ಮೇಲೆ ಪ್ರಮಾಣ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದಳು.

14ಆಗ ಅವರು ಆಕೆಗೆ, “ನೀನು ಈ ನಮ್ಮ ಕಾರ್ಯವನ್ನು ಬಹಿರಂಗ ಮಾಡದೆ ಇದ್ದರೆ, ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿ ಇರುವೆವು. ಯೆಹೋವ ದೇವರು ನಮಗೆ ದೇಶವನ್ನು ಕೊಟ್ಟಾಗ, ಸತ್ಯದಿಂದಲೂ, ದಯೆಯಿಂದಲೂ ನಡೆದುಕೊಳ್ಳುವೆವು,” ಎಂದರು.

15ಆಗ ಆಕೆಯು ಅವರನ್ನು ಹಗ್ಗದಿಂದ ಕಿಟಿಕಿಯ ಮೂಲಕ ಇಳಿಸಿಬಿಟ್ಟಳು. ಏಕೆಂದರೆ ಆಕೆಯ ಮನೆಯು ಪಟ್ಟಣದ ಗೋಡೆಯ ಮೇಲೆ ಇತ್ತು.

16ಆಕೆಯು ಅವರಿಗೆ, “ನಿಮ್ಮನ್ನು ಹಿಂದಟ್ಟುವವರು ನಿಮಗೆ ಅಡ್ಡಬಾರದ ಹಾಗೆ ನೀವು ಬೆಟ್ಟಕ್ಕೆ ಹೋಗಿ, ಅವರು ತಿರುಗಿ ಬರುವವರೆಗೂ ಅಲ್ಲಿ ಮೂರು ದಿವಸ ಅಡಗಿಕೊಂಡಿದ್ದು, ತರುವಾಯ ನಿಮ್ಮ ಮಾರ್ಗವಾಗಿ ಹೋಗಿರಿ,” ಎಂದಳು.

17ಆಗ ಆ ಮನುಷ್ಯರು ಆಕೆಗೆ, “ನೀನು ನಮ್ಮಿಂದ ಮಾಡಿಸಿದ ಈ ನಿನ್ನ ಪ್ರಮಾಣದಿಂದ ಬಿಡುಗಡೆಯಾಗಿರುವೆವು.

18ಇಗೋ, ನಾವು ಈ ದೇಶದಲ್ಲಿ ಪ್ರವೇಶಿಸುವಾಗ, ನೀನು ನಮ್ಮನ್ನು ಇಳಿಸಿದ ಕಿಟಿಕಿಗೆ ಈ ಕಡುಗೆಂಪು ಹಗ್ಗವನ್ನು ಕಟ್ಟಿ, ನಿನ್ನ ತಂದೆಯನ್ನೂ, ನಿನ್ನ ತಾಯಿಯನ್ನೂ, ನಿನ್ನ ಸಹೋದರರನ್ನೂ, ನಿನ್ನ ತಂದೆಯ ಮನೆಯವರೆಲ್ಲರನ್ನೂ ನಿನ್ನ ಮನೆಯಲ್ಲಿ ಕೂಡಿಸಿಕೊಳ್ಳಬೇಕು.

19ಯಾವನಾದರೂ ನಿನ್ನ ಮನೆಯ ಬಾಗಿಲಿನಿಂದ ಹೊರಗೆ ಹೊರಟು ಬೀದಿಗೆ ಬಂದರೆ, ಅವನ ರಕ್ತವು ಅವನ ತಲೆಯ ಮೇಲೆ ಇರುವುದು. ನಾವು ನಿರಪರಾಧಿಗಳಾಗಿರುವೆವು. ಆದರೆ ನಿನ್ನ ಸಂಗಡ ಮನೆಯಲ್ಲಿ ಇರುವ ಯಾವನ ಮೇಲಾದರೂ ಕೈ ಮಾಡಿದರೆ, ಅವನ ರಕ್ತ ಅಪರಾಧವು ನಮ್ಮ ತಲೆಯ ಮೇಲೆ ಇರುವುದು.

20ಆದರೆ ನೀನು ಈ ನಮ್ಮ ಕಾರ್ಯವನ್ನು ಬಹಿರಂಗಪಡಿಸಿದರೆ, ನೀನು ನಮಗೆ ಇಟ್ಟ ಆಣೆಯಿಂದ ನಾವು ಬಿಡುಗಡೆಯಾಗಿರುವೆವು,” ಎಂದರು.

21ಅದಕ್ಕೆ ಆಕೆಯು, “ನಿಮ್ಮ ಮಾತುಗಳ ಪ್ರಕಾರವೇ ಆಗಲಿ,” ಎಂದು ಹೇಳಿದಳು.

The Spies Return and Report

22ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರುಗಿ ಬರುವವರೆಗೂ ಮೂರು ದಿನ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವರನ್ನು ಹುಡುಕಿ ಕಾಣದೆ ಹೋದರು.

23ಆಗ ಅವರಿಬ್ಬರು ಹಿಂದಿರುಗಿ ಬೆಟ್ಟದಿಂದ ಇಳಿದು, ನದಿಯನ್ನು ದಾಟಿ, ನೂನನ ಮಗ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ಅವರಿಗೆ ವಿವರಿಸಿದರು.

24ಅವರು ಯೆಹೋಶುವನಿಗೆ, “ನಿಶ್ಚಯವಾಗಿ ಯೆಹೋವ ದೇವರು ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾರೆ. ದೇಶದ ನಿವಾಸಿಗಳೆಲ್ಲರೂ ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ,” ಎಂದರು.

家庭崇拜·新约

시편 123, 124, 125

打开经文 →
第123章

Eyes Lifted in Hope of Mercy

1ಪರಲೋಕದಲ್ಲಿ ಸಿಂಹಾಸನರಾಗಿರುವವರೇ,

2ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನು ನೋಡುವ ಪ್ರಕಾರ,

3ನಮ್ಮನ್ನು ಕರುಣಿಸು, ಯೆಹೋವ ದೇವರೇ, ನಮ್ಮನ್ನು ಕರುಣಿಸು;

4ನಾವು ಸುಖಭೋಗಿಗಳ ಗೇಲಿಯನ್ನೂ

第124章

Salvation like a Bird Escaped from the Snare

1ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ, ಏನಾಗುತ್ತಿತ್ತು

2ವೈರಿಗಳು ನಮಗೆ ವಿರೋಧವಾಗಿ ಎದ್ದಾಗ

3ಅವರು ನಮ್ಮ ಮೇಲೆ ರೋಷಗೊಂಡು

4ಆಗ ಪ್ರವಾಹವು ನಮ್ಮನ್ನು ಮುಳುಗಿಸುತ್ತಿತ್ತು;

5ರಭಸ ಪ್ರವಾಹ ನಮ್ಮನ್ನು

6ಆದರೆ ನಮ್ಮನ್ನು ವೈರಿಗಳ ಹಲ್ಲುಗಳಿಗೆ ಬೇಟೆಯಾಗಿ ಕೊಡದೆ ಇದ್ದ

7ನಾವು ಬೇಟೆಗಾರರ ಬಲೆಯಿಂದ

8ನಮ್ಮ ಸಹಾಯವು ಆಕಾಶವನ್ನೂ,

第125章

The Lord Who Surrounds and Keeps like the Mountains

1ಯೆಹೋವ ದೇವರಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗಿದ್ದಾರೆ;

2ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ,

3ನೀತಿವಂತರು ತಮ್ಮ ಕೈಗಳನ್ನು

4ಯೆಹೋವ ದೇವರೇ, ಒಳ್ಳೆಯವರಿಗೂ,

5ಆದರೆ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು,

个人灵修·旧约/诗篇

이사야 62

打开经文 →
第62章

Zion's New Name and the Unceasing Watchmen

1ಚೀಯೋನಿಗೋಸ್ಕರ ನಾನು ಮೌನವಾಗಿರುವುದಿಲ್ಲ!

2ಆಗ ಇತರ ಜನಾಂಗಗಳು ನಿನ್ನ ವಿಮೋಚನೆಯನ್ನೂ,

3ಯೆಹೋವ ದೇವರ ಕೈಯಲ್ಲಿ ಮಹಿಮೆಯ ಕಿರೀಟವಾಗಿಯೂ,

4ಇನ್ನು ಮೇಲೆ ನೀನು ಗಂಡಬಿಟ್ಟವಳೆಂದು ಎನಿಸಿಕೊಳ್ಳುವುದಿಲ್ಲ

5ಯುವಕನು ಕನ್ಯೆ ಯುವತಿಯನ್ನು ವರಿಸುವಂತೆ,

6ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ.

7ಯೆರೂಸಲೇಮನ್ನು ಸ್ಥಾಪಿಸಿ,

8ಯೆಹೋವ ದೇವರು ತನ್ನ ಬಲಗೈಯಿಂದಲೂ,

9ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆ ಹಾಕಿದವರೇ,

10ಹಾದುಹೋಗಿರಿ, ಬಾಗಿಲುಗಳಲ್ಲಿ ಹಾದುಹೋಗಿರಿ,

11ಇಗೋ, ಯೆಹೋವ ದೇವರು ಭೂಮಿಯ

12ಆಗ ಅವರು, ಪರಿಶುದ್ಧ ಜನರೂ,

个人灵修·新约

마태복음 10

打开经文 →
第10章

Jesus Sends Out the Twelve Apostles

1ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ಅಶುದ್ಧಾತ್ಮಗಳನ್ನು ಓಡಿಸುವುದಕ್ಕೂ ಎಲ್ಲಾ ತರವಾದ ವ್ಯಾಧಿಯನ್ನೂ ರೋಗವನ್ನೂ ಸ್ವಸ್ಥಮಾಡುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.

2ಆ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿದ್ದವು:

3ಫಿಲಿಪ್ಪ, ಬಾರ್ತೊಲೊಮಾಯ;

4ಕಾನಾನ್ಯನಾದ ಸೀಮೋನ ಮತ್ತು ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ.

5ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟಿದ್ದೇನೆಂದರೆ: “ಯೆಹೂದ್ಯರಲ್ಲದವರ ಬಳಿಗೆ ಹೋಗಬೇಡಿರಿ, ಸಮಾರ್ಯರ ಊರನ್ನೂ ಪ್ರವೇಶಿಸಬೇಡಿರಿ.

6ಆದರೆ ತಪ್ಪಿಹೋದ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ.

7ನೀವು ಹೋಗುತ್ತಾ, ‘ಪರಲೋಕ ರಾಜ್ಯವು ಸಮೀಪವಾಯಿತು,’ ಎಂದು ಸಾರಿ ಹೇಳಿರಿ.

8ರೋಗಿಗಳನ್ನು ಸ್ವಸ್ಥಮಾಡಿರಿ, ಮರಣಹೊಂದಿದವರನ್ನು ಎಬ್ಬಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಪಡೆದಿದ್ದೀರಿ; ಉಚಿತವಾಗಿ ಕೊಡಿರಿ.

9“ನಿಮ್ಮ ನಡುಕಟ್ಟುಗಳಲ್ಲಿ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಇಟ್ಟುಕೊಳ್ಳಬೇಡಿರಿ.

10ಪ್ರಯಾಣಕ್ಕೆ ಚೀಲವನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಪಾದರಕ್ಷೆಗಳನ್ನಾಗಲಿ, ಕೋಲುಗಳನ್ನಾಗಲಿ ತೆಗೆದುಕೊಳ್ಳಬೇಡಿರಿ. ಏಕೆಂದರೆ ಕೆಲಸದವನು ತನ್ನ ಜೀವನಾಧಾರಕ್ಕೆ ಅರ್ಹನು.

11ನೀವು ಯಾವುದಾದರೂ ಒಂದು ಪಟ್ಟಣವನ್ನು, ಇಲ್ಲವೆ ಹಳ್ಳಿಯನ್ನು ಪ್ರವೇಶಿಸುವಾಗ, ಅದರಲ್ಲಿ ಯೋಗ್ಯ ವ್ಯಕ್ತಿ ಯಾರೆಂದು ವಿಚಾರಿಸಿರಿ, ಅಲ್ಲಿಂದ ಹೊರಡುವವರೆಗೆ ಅಲ್ಲಿಯೇ ತಂಗಿರಿ.

12ನೀವು ಒಂದು ಮನೆಯೊಳಗೆ ಪ್ರವೇಶಿಸಿದಾಗ, ಆ ಮನೆಯವರನ್ನು ಹರಸಿರಿ.

13ಆ ಮನೆಯು ಅಯೋಗ್ಯವಾಗಿದ್ದರೆ, ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ.

14ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ, ನೀವು ಆ ಮನೆಯನ್ನು ಇಲ್ಲವೆ ಆ ಪಟ್ಟಣವನ್ನು ಬಿಟ್ಟು ಹೊರಡುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.

15ನ್ಯಾಯತೀರ್ಪಿನ ದಿನದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಗತಿಯು ಆ ಪಟ್ಟಣಕ್ಕಿಂತ ಹೆಚ್ಚು ತಾಳುವಂಥದ್ದಾಗಿರುವುದು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

Coming Persecutions Foretold

16“ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದ್ದರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ.

17ಆದರೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು.

18ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರ ಮುಂದೆ ಒಯ್ಯುವರು. ಹೀಗೆ ಅವರಿಗೂ ಯೆಹೂದ್ಯರಲ್ಲದವರಿಗೂ ನೀವು ಸಾಕ್ಷಿಗಳಾಗುವಿರಿ.

19ಆದರೆ ಅವರು ನಿಮ್ಮನ್ನು ಬಂಧಿಸುವಾಗ, ನೀವು ಹೇಗೆ ಇಲ್ಲವೆ ಏನು ಮಾತನಾಡಬೇಕೆಂದು ಯೋಚಿಸಬೇಡಿರಿ. ನೀವು ಏನು ಮಾತನಾಡಬೇಕೆಂಬುದು ಆ ಗಳಿಗೆಯಲ್ಲೇ ನಿಮಗೆ ತಿಳಿಸಲಾಗುವುದು,

20ಏಕೆಂದರೆ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮೊಳಗಿಂದ ಮಾತನಾಡುವರು.

21“ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.

22ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.

23ಒಂದು ಸ್ಥಳದಲ್ಲಿ ನಿಮಗೆ ಹಿಂಸೆಯಾದರೆ ಇನ್ನೊಂದು ಸ್ಥಳಕ್ಕೆ ಓಡಿಹೋಗಿರಿ. ಮನುಷ್ಯಪುತ್ರನು ಬರುವಷ್ಟರಲ್ಲಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

24“ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ತನ್ನ ಯಜಮಾನನಿಗಿಂತ ಶ್ರೇಷ್ಠನಲ್ಲ.

25ಶಿಷ್ಯನು ತನ್ನ ಗುರುವಿನಂತೆಯೂ ದಾಸನು ತನ್ನ ಯಜಮಾನನಂತೆಯೂ ಇದ್ದರೆ ಸಾಕು. ಮನೆಯ ಯಜಮಾನನನ್ನೇ ಅವರು, ‘ಬೆಲ್ಜೆಬೂಲನು’ ಎಂದು ಕರೆದರೆ, ಯಜಮಾನನ ಮನೆಯವರನ್ನು ಇನ್ನೂ ಎಷ್ಟೋ ಕೆಟ್ಟದ್ದಾಗಿ ಕರೆಯುವರಲ್ಲವೇ!

Fear Him Who Is to Be Feared

26“ಆದ್ದರಿಂದ ಅವರಿಗೆ ಹೆದರಬೇಡಿರಿ, ಪ್ರಕಟಗೊಳ್ಳದಂತೆ ಯಾವುದೂ ಮುಚ್ಚಿಡಲಾಗುವುದಿಲ್ಲ, ತಿಳಿಯಲಾಗದಂತೆ ಯಾವುದೂ ಗುಪ್ತವಾಗಿರುವುದಿಲ್ಲ.

27ನಾನು ನಿಮಗೆ ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ. ನೀವು ಕಿವಿಯಲ್ಲಿ ಕೇಳುವುದನ್ನು ಮಾಳಿಗೆಯ ಮೇಲೆ ಸಾರಿರಿ.

28ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ.

29ಒಂದು ರೂಪಾಯಿಗೆ ಎರಡು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ.

30ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.

31ಆದ್ದರಿಂದ ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು.

32“ಜನರ ಮುಂದೆ ನನ್ನನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.

33ಯಾವನಾದರೂ ಜನರ ಮುಂದೆ ನನ್ನನ್ನು ನಿರಾಕರಿಸಿದರೆ, ನಾನು ಸಹ ಅವನನ್ನು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನಿರಾಕರಿಸುವೆನು.

Not Peace, but a Sword

34“ನಾನು ಭೂಮಿಯ ಮೇಲೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿರಿ. ಸಮಾಧಾನವನ್ನಲ್ಲ, ಖಡ್ಗವನ್ನು ತರಲು ಬಂದೆನು.

35ಹೇಗೆಂದರೆ,

36ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.’

37“ನನಗಿಂತ ಮೇಲಾಗಿ ತಂದೆಯನ್ನಾಗಲಿ, ತಾಯಿಯನ್ನಾಗಲಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ಮಗನನ್ನಾಗಲಿ, ಮಗಳನ್ನಾಗಲಿ ನನಗಿಂತ ಮೇಲಾಗಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.

38ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.

39ತನ್ನ ಪ್ರಾಣವನ್ನು ಕಂಡುಕೊಳ್ಳುವವನು ಅದನ್ನು ಕಳೆದುಕೊಳ್ಳುವನು. ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.

Rewards for Receiving a Disciple

40“ನಿಮ್ಮನ್ನು ಸ್ವಾಗತಿಸುವವರು ನನ್ನನ್ನು ಸ್ವಾಗತಿಸುತ್ತಾರೆ. ನನ್ನನ್ನು ಸ್ವಾಗತಿಸಿದವರು, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವಾಗತಿಸುತ್ತಾರೆ.

41ಪ್ರವಾದಿಯೆಂದು ಪ್ರವಾದಿಯನ್ನು ಸ್ವಾಗತಿಸುವವರು ಪ್ರವಾದಿಯ ಪ್ರತಿಫಲವನ್ನು ಪಡೆಯುವರು; ನೀತಿವಂತನೆಂದು ನೀತಿವಂತನನ್ನು ಸ್ವಾಗತಿಸುವವರು ನೀತಿವಂತನ ಪ್ರತಿಫಲವನ್ನು ಪಡೆಯುವರು.

42ಯಾವನಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಕೇವಲ ಒಂದು ಲೋಟ ತಣ್ಣೀರನ್ನು ಕುಡಿಯುವುದಕ್ಕೆ ಕೊಡುವವನು ತನ್ನ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ಸತ್ಯವಾಗಿ ನಾನು ನಿಮಗೆ ಹೇಳುತ್ತೇನೆ.”