简
KO 韩语
EN 英语
CN 中文
JP 日语
PH 菲律宾语族
HI 印地语
BN 孟加拉语
TA 泰米尔语
TE 泰卢固语
ML 马拉雅拉姆语
FA 波斯语
MY 缅甸语
NE 尼泊尔语
MR 马拉地语
KN 卡纳达语
HA 豪萨语
YO 约鲁巴语
SW 斯瓦希里语
IG 伊博语
ID 印度尼西亚语
PT 葡萄牙语
VI 越南语
AR 阿拉伯语
RU 俄语
UK 乌克兰语
RO 罗马尼亚语
IT 意大利语
FI 芬兰语
TO 汤加语
HR 克罗地亚语
SR 塞尔维亚语
TR 土耳其语
HU 匈牙利语
PL 波兰语
SK 斯洛伐克语
LA 拉丁语
NL 荷兰语
CS 捷克语
FR 法语
ES 西班牙语
DE 德语
OT 其他语言
读经确认
你完成了这一天的麦琴读经吗?
点击确认后,会在我的页面麦琴进度表中记录为已完成。
사무엘하 21
Famine and the Gibeonites' Revenge
1ದಾವೀದನ ದಿವಸಗಳಲ್ಲಿ ವರ್ಷದಿಂದ ವರ್ಷಕ್ಕೆ ಮೂರು ವರ್ಷ ಬರ ಉಂಟಾಗಿತ್ತು. ಆಗ ದಾವೀದನು ಯೆಹೋವ ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು, “ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಈ ಬರ ಬಂದಿದೆ,” ಎಂದು ಹೇಳಿದರು.
2ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆಕಳುಹಿಸಿದನು. ಗಿಬ್ಯೋನ್ಯರು ಇಸ್ರಾಯೇಲರಿಗೆ ಸೇರಿದವರಲ್ಲ. ಅಮೋರಿಯರಲ್ಲಿ ಉಳಿದ ಜನರಾಗಿದ್ದರು. ಅವರನ್ನು ಕೊಲ್ಲುವುದಿಲ್ಲವೆಂದು ಇಸ್ರಾಯೇಲರು ಆಣೆ ಇಟ್ಟಿದ್ದರು. ಆದರೆ ಸೌಲನು ಇಸ್ರಾಯೇಲರಿಗಾಗಿಯೂ, ಯೆಹೂದದವರಿಗಾಗಿಯೂ ತನಗಿದ್ದ ಆಸಕ್ತಿಯಿಂದ ಅವರನ್ನು ಕೊಂದುಹಾಕಲು ಪ್ರಯತ್ನಮಾಡಿದ್ದನು.
3ದಾವೀದನು ಗಿಬ್ಯೋನ್ಯರಿಗೆ, “ನಾನು ನಿಮಗೆ ಮಾಡಬೇಕಾದದ್ದೇನು? ನೀವು ಯೆಹೋವ ದೇವರ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ, ನಾನು ಯಾವುದರಿಂದ ಪ್ರಾಯಶ್ಚಿತ್ತ ಮಾಡಲಿ,” ಎಂದು ಕೇಳಿದನು.
4ಆಗ ಗಿಬ್ಯೋನ್ಯರು ಅವನಿಗೆ, “ಸೌಲನ ಕೈಯಿಂದಲಾದರೂ, ಅವನ ಮನೆಯವರ ಕೈಯಿಂದಲಾದರೂ, ನಮಗೆ ಬೆಳ್ಳಿಯಾದರೂ, ಬಂಗಾರವಾದರೂ ಬೇಡ. ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕಬೇಕೆಂಬುದು ನಮಗೆ ಅಗತ್ಯವಿಲ್ಲ,” ಎಂದರು.
5ಅವರು ಅರಸನಿಗೆ, “ಯಾವನು ನಮ್ಮನ್ನು ಸಂಹರಿಸಿಬಿಟ್ಟು, ನಾವು ಇಸ್ರಾಯೇಲಿನ ಸಮಸ್ತ ಮೇರೆಗಳೊಳಗೆ ನಿಲ್ಲದೆ ನಾಶವಾಗುವ ಹಾಗೆ ನಮಗೆ ಕೇಡು ಮಾಡಲು ನೆನಸಿದನೋ,
6ಅವನ ಪುತ್ರರಲ್ಲಿ ಏಳುಮಂದಿಯನ್ನು ನಮಗೆ ಒಪ್ಪಿಸು. ಆಗ ನಾವು ಯೆಹೋವ ದೇವರು ಆಯ್ದುಕೊಂಡ ಸೌಲನ ಊರಾದ ಗಿಬೆಯದಲ್ಲಿ ಅವರನ್ನು ಯೆಹೋವ ದೇವರಿಗೋಸ್ಕರ ಗಲ್ಲಿಗೆ ಹಾಕುವೆವು,” ಎಂದರು.
7ಆದರೆ ತಮಗೂ, ದಾವೀದನಿಗೂ, ಸೌಲನ ಮಗ ಯೋನಾತಾನನಿಗೂ ಯೆಹೋವ ದೇವರನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ, ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ,
8ಅಯ್ಯಾಹನ ಮಗಳಾಗಿರುವ ರಿಚ್ಪಳು ಸೌಲನಿಗೆ ಹೆತ್ತ ಅವಳ ಇಬ್ಬರು ಮಕ್ಕಳಾದ ಅರ್ಮೋನಿಯನ್ನೂ, ಮತ್ತೊಬ್ಬ ಮೆಫೀಬೋಶೆತನನ್ನೂ, ಸೌಲನ ಮಗಳಾಗಿರುವ ಮೇರಬಳು ಮೆಹೋಲದವನಾದ ಬರ್ಜಿಲ್ಲೈಯ ಮಗನಾಗಿರುವ ಅದ್ರಿಯೇಲನಿಗೆ ಸಾಕಿದ ಐದು ಮಂದಿ ಮಕ್ಕಳನ್ನೂ ಹಿಡಿದುಕೊಂಡು,
9ಅವರನ್ನು ಗಿಬ್ಯೋನ್ಯರ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವರು ಇವರನ್ನು ಕೊಂದು, ಯೆಹೋವ ದೇವರ ಮುಂದೆ ಬೆಟ್ಟದ ಮೇಲೆ ನೇತುಹಾಕಿದರು. ಈ ಏಳುಮಂದಿಯೂ ಒಂದೇ ಸಾರಿ ಹತರಾದರು. ಇವರನ್ನು ಕೊಂದಾಗ ಜವೆಗೋಧಿ ಸುಗ್ಗಿಯ ಆರಂಭವಾಗಿತ್ತು.
10ಆಗ ಅಯ್ಯಾಹನ ಮಗಳಾದ ರಿಚ್ಪಳು ಗೋಣಿತಟ್ಟನ್ನು ತೆಗೆದುಕೊಂಡುಹೋಗಿ, ಗುಡ್ಡದ ಮೇಲೆ ಅದನ್ನು ತನಗೋಸ್ಕರ ಹಾಸಿ ಅದರ ಮೇಲೆ ಕುಳಿತುಕೊಂಡಳು. ಸುಗ್ಗಿಯ ದಿವಸ ಮೊದಲ್ಗೊಂಡು ಆಕಾಶದಿಂದ ಶವಗಳ ಮೇಲೆ ಮಳೆ ಬೀಳುವ ತನಕ, ಹಗಲಲ್ಲಿ ಆಕಾಶದ ಪಕ್ಷಿಗಳಾದರೂ, ರಾತ್ರಿಯಲ್ಲಿ ಕಾಡುಮೃಗಗಳಾದರೂ ಶವಗಳನ್ನು ತಿನ್ನದಂತೆ ಕಾಯುತ್ತಿದ್ದಳು.
11ಅಯ್ಯಾಹನ ಮಗಳಾದ ರಿಚ್ಪಳೆಂಬ ಸೌಲನ ಉಪಪತ್ನಿ ಮಾಡಿದ್ದು ದಾವೀದನಿಗೆ ತಿಳಿಸಲಾಯಿತು.
12ಆಗ ದಾವೀದನು ಹೋಗಿ ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕೆ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಗಿಲ್ಬೋವದಲ್ಲಿ ಸೌಲನನ್ನು ಸೋಲಿಸಿದ ನಂತರ, ಅವನ ಮತ್ತು ಅವನ ಮಗನಾದ ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ತೂಗುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಆ ಶವಗಳನ್ನು ಕದ್ದುಕೊಂಡು ಹೋಗಿದ್ದರು.
13ದಾವೀದನು ಸೌಲನ ಎಲುಬುಗಳನ್ನೂ ಅವನ ಮಗನಾದ ಯೋನಾತಾನನ ಎಲುಬುಗಳನ್ನೂ ಗಿಬ್ಯೋನಿನಲ್ಲಿ ಹತರಾದ ಆ ಮನುಷ್ಯರ ಎಲುಬುಗಳನ್ನೂ ಅವರಿಂದ ತೆಗೆದುಕೊಂಡನು.
14ಅವುಗಳನ್ನು ಬೆನ್ಯಾಮೀನನ ದೇಶದ ಚೇಲದಲ್ಲಿರುವ ಸೌಲನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಳಿಟ್ಟರು. ಅವರು ಅರಸನು ಆಜ್ಞಾಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ, ದೇವರು ದೇಶಕ್ಕೋಸ್ಕರ ಮಾಡಿದ ಬಿನ್ನಹವನ್ನು ಕೇಳಿದರು.
Battles with the Philistine Giants
15ಫಿಲಿಷ್ಟಿಯರು ತಿರುಗಿ ಇಸ್ರಾಯೇಲರ ಮೇಲೆ ಯುದ್ಧಮಾಡಿದರು. ಆಗ ದಾವೀದನು ತನ್ನ ಜನರೊಂದಿಗೆ ಹೋಗಿ, ಫಿಲಿಷ್ಟಿಯರ ಸಂಗಡ ಯುದ್ಧಮಾಡಿದನು. ದಾವೀದನು ದಣಿದು ಹೋದನು.
16ಆಗ ಮುನ್ನೂರು ಬೆಳ್ಳಿ ನಾಣ್ಯದ ತೂಕದ ಕಂಚು ಈಟಿಯುಳ್ಳ, ಹೊಸ ಖಡ್ಗವನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ರೆಫಾಯನ ಮಕ್ಕಳಲ್ಲಿ ಇಷ್ಬೀಬೆನೋಬನು ದಾವೀದನನ್ನು ಕೊಲ್ಲಬೇಕೆಂದಿದ್ದನು.
17ಆದರೆ ಚೆರೂಯಳ ಮಗ ಅಬೀಷೈಯನು ಅವನಿಗೆ ಸಹಾಯವಾಗಿ ಬಂದು, ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿದನು. ಆಗ ದಾವೀದನ ಜನರು ಅವನಿಗೆ, “ಇಸ್ರಾಯೇಲಿನ ಬೆಳಕಾಗಿರುವ ನೀನು ಆರಿಹೋಗದಂತೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಬರಬೇಡ,” ಎಂದು ಆಣೆ ಇಟ್ಟರು.
18ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೋಬದಲ್ಲಿ ಮತ್ತೊಂದು ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.
19ಅನಂತರ ಫಿಲಿಷ್ಟಿಯರ ಸಂಗಡ ಗೋಬದಲ್ಲಿ ಯುದ್ಧ ಉಂಟಾದಾಗ, ಬೇತ್ಲೆಹೇಮಿನವನಾದ ಯಾಯೀರನ ಮಗನಾದ ಎಲ್ಹನಾನನು ಗಿತ್ತೀಯನಾದ ಗೊಲ್ಯಾತನ ಸಹೋದರರನ್ನು ಕೊಂದನು. ಈ ಗೊಲ್ಯಾತನ ಈಟಿಯ ಹಿಡಿಕೆಯು ನೇಯುವವರ ಕುಂಟೆ ಕಟ್ಟಿಗೆಗೆ ಸಮನಾಗಿತ್ತು.
20ಇನ್ನೊಂದು ಸಾರಿ ಗತ್ ಊರಿನಲ್ಲಿ ಯುದ್ಧ ಉಂಟಾದಾಗ, ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು. ಅವನ ಕೈಕಾಲುಗಳ ಬೆರಳುಗಳು ಆರಾರರಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನು ಸಹ ರೆಫಾಯನಿಗೆ ಹುಟ್ಟಿದವನಾಗಿದ್ದನು.
21ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾದ ಶಿಮೆಯನ ಮಗನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.
22ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ರೆಫಾಯರ ವಂಶಜರು. ಇವರು ದಾವೀದನಿಂದಲೂ ಅವನ ಜನರಿಂದಲೂ ಸಂಹಾರವಾಗಿ ಹೋದರು.
갈라디아서 1
Paul's Greeting and Salvation in Christ
1ಮನುಷ್ಯರಿಂದಾಗಲಿ, ಮನುಷ್ಯನ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಕ್ರಿಸ್ತ ಯೇಸುವಿನ ಮುಖಾಂತರವೂ ಅವರನ್ನು ಮರಣದಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲನಾದ ಪೌಲನೆಂಬ ನಾನೂ
2ನನ್ನ ಜೊತೆಯಲ್ಲಿರುವ ಎಲ್ಲಾ ಪ್ರಿಯರೂ,
3ನಮ್ಮ ತಂದೆಯಾದ ದೇವರಿಂದಲೂ ಕರ್ತ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಇರಲಿ.
4ಈ ಯೇಸುವೇ ನಮ್ಮನ್ನು ಈಗಿನ ದುಷ್ಟ ಯುಗದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಪಾಪಗಳಿಗಾಗಿ ತಮ್ಮನ್ನೇ ಬಲಿಯಾಗಿ ಒಪ್ಪಿಸಿದರು.
5ದೇವರಿಗೆ ಯುಗಯುಗಾಂತರಗಳಿಗೂ ಮಹಿಮೆಯಾಗಲಿ. ಆಮೆನ್.
There Is No Other Gospel
6ಕ್ರಿಸ್ತ ಯೇಸುವಿನ ಕೃಪೆಯಲ್ಲಿ ನಿಮ್ಮನ್ನು ಕರೆದ ದೇವರನ್ನು ನೀವು ಇಷ್ಟು ಬೇಗನೆ ಬಿಟ್ಟು ಬೇರೆ ಸುವಾರ್ತೆಯ ಕಡೆಗೆ ತಿರುಗಿದಿರೆಂದು ನಾನು ಆಶ್ಚರ್ಯಪಡುತ್ತೇನೆ.
7ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮನ್ನು ಗಲಿಬಿಲಿಗೆ ಒಳಪಡಿಸಿ, ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ವಕ್ರಪಡಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ.
8ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೊಂದನ್ನು ನಾವೇ ಆಗಲಿ, ಪರಲೋಕದೊಳಗಿಂದ ಬಂದ ದೇವದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ.
9ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ, ಅವನು ಶಾಪಗ್ರಸ್ತನಾಗಲಿ ಎಂದು ಮೊದಲು ಹೇಳಿದಂತೆಯೇ ಈಗಲೂ ನಾನು ಪುನಃ ಹೇಳುತ್ತೇನೆ.
10ನಾನು ಈಗ ಯಾರ ಅನುಮೋದವನ್ನು ಗಳಿಸಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತಿಸುತ್ತಿದ್ದೇನೋ? ಇನ್ನೂ ಮನುಷ್ಯರನ್ನೇ ಮೆಚ್ಚಿಸುವವನಾಗಿದ್ದರೆ, ನಾನು ಕ್ರಿಸ್ತ ಯೇಸುವಿನ ದಾಸನಾಗಿರಲಾರೆ.
The Gospel Received by Revelation, Not from Man
11ಪ್ರಿಯರೇ, ನಾನು ಸಾರಿದ ಸುವಾರ್ತೆಯು ಮಾನವೀಯವಾದದ್ದಲ್ಲವೆಂದು ನಿಮಗೆ ತಿಳಿಯಪಡಿಸುತ್ತೇನೆ.
12ನಾನು ಅದನ್ನು ಯಾವ ಮನುಷ್ಯನಿಂದಲೂ ಪಡೆಯಲಿಲ್ಲ, ನನಗೆ ಯಾವ ಮನುಷ್ಯನೂ ಉಪದೇಶಿಸಲಿಲ್ಲ, ಆದರೆ ನಾನು ಅದನ್ನು ಕ್ರಿಸ್ತ ಯೇಸುವಿನ ಪ್ರಕಟನೆಯಿಂದಲೇ ಸ್ವೀಕರಿಸಿಕೊಂಡೆನು.
13ನಾನು ಯೆಹೂದ್ಯ ವಿಶ್ವಾಸದಲ್ಲಿದ್ದಾಗ ನನ್ನ ಹಿಂದಿನ ನಡತೆಯನ್ನು ನೀವು ಕೇಳಿದ್ದೀರಷ್ಟೇ. ನಾನು ದೇವರ ಸಭೆಯನ್ನು ಮಿತಿಮೀರಿ ಹಿಂಸೆಪಡಿಸಿ ಹಾಳುಮಾಡಲು ಯತ್ನಿಸುತ್ತಿದ್ದೆನು.
14ಇದಲ್ಲದೆ ನಾನು ನನ್ನ ಪಿತೃಗಳ ಸಂಪ್ರದಾಯಗಳಲ್ಲಿ ಅತ್ಯಂತ ಅಭಿಮಾನವುಳ್ಳವನಾಗಿ ಸಮಕಾಲಿಕರಾದ ನನ್ನ ಜನರೊಳಗೆ ಅನೇಕರಿಗಿಂತ ಯೆಹೂದ್ಯ ವಿಶ್ವಾಸದಲ್ಲಿ ಎಷ್ಟೋ ಪ್ರಗತಿಯನ್ನು ಹೊಂದಿದವನಾಗಿದ್ದೆನು.
15ಆದರೆ ದೇವರು ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ, ತಮ್ಮ ಕೃಪೆಯ ಮೂಲಕ ನನ್ನನ್ನು ಕರೆದು,
16ದೇವರು ತಮ್ಮ ಪುತ್ರನನ್ನು ನನ್ನಲ್ಲಿ ಪ್ರಕಟಿಸಿ, ಯೆಹೂದ್ಯರಲ್ಲದವರಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಮನಸ್ಸು ಮಾಡಿದರು. ಕೂಡಲೇ ದೇವರ ಪುತ್ರ ಆಗಿರುವವರ ಪ್ರಕಟಣೆಯ ತರುವಾಯ ನಾನು ಯಾವ ಮನುಷ್ಯರನ್ನು ವಿಚಾರಿಸಲಿಲ್ಲ.
17ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ, ನಾನು ಅರೇಬಿಯಾಕ್ಕೆ ಹೋದೆನು. ಅನಂತರ ಪುನಃ ದಮಸ್ಕಕ್ಕೆ ಹಿಂದಿರುಗಿದೆನು.
Paul's Activity Apart from the Jerusalem Church
18ಮೂರು ವರ್ಷಗಳ ನಂತರವೇ ನಾನು ಕೇಫನನ್ನು ಪರಿಚಯಮಾಡಿಕೊಳ್ಳಲು ಯೆರೂಸಲೇಮಿಗೆ ಹೋಗಿ ಅವನೊಂದಿಗೆ ಹದಿನೈದು ದಿವಸ ಇದ್ದೆನು.
19ಆದರೆ ಕರ್ತ ಯೇಸುವಿನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.
20ಈಗ ನಾನು ನಿಮಗೆ ಬರೆಯುತ್ತಿರುವ ವಿಷಯಗಳು ಸುಳ್ಳಲ್ಲ ಎಂದು ದೇವರ ಮುಂದೆ ನಾನು ನಿಶ್ಚಯವಾಗಿ ನಿಮಗೆ ಹೇಳುತ್ತೇನೆ.
21ಆಮೇಲೆ ಸಿರಿಯಾ ಮತ್ತು ಕಿಲಿಕ್ಯ ಪ್ರಾಂತಗಳಿಗೆ ಬಂದೆನು.
22ಆಗ ಕ್ರಿಸ್ತ ಯೇಸುವಿನಲ್ಲಿರುವ ಯೂದಾಯದ ಸಭೆಗಳಿಗೆ ನನ್ನ ಪರಿಚಯವಿರಲಿಲ್ಲ.
23ಆದರೆ ಅವರು, “ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದ ಇವನು, ತಾನು ನಾಶಮಾಡಲು ಪ್ರಯತ್ನಿಸಿದ್ದ ವಿಶ್ವಾಸವನ್ನೇ ಈಗ ಪ್ರಸಂಗಿಸುತ್ತಿದ್ದಾನೆ,” ಎಂಬುದನ್ನು ಮಾತ್ರ ಕೇಳಿದ್ದರು.
24ಅವರು ನನ್ನ ದೆಸೆಯಿಂದ ದೇವರನ್ನು ಕೊಂಡಾಡಿದರು.
에스겔 28
The Pride of Tyre's King Who Claimed to Be a God
1ಯೆಹೋವ ದೇವರ ವಾಕ್ಯವು ನನಗೆ ಬಂದಿತು:
2“ಮನುಷ್ಯಪುತ್ರನೇ, ಟೈರಿನ ಆಡಳಿತ ಅಧಿಕಾರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
3ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆಯಾ?
4ನಿನ್ನ ಜ್ಞಾನದಿಂದಲೂ ನಿನ್ನ ವಿವೇಕದಿಂದಲೂ
5ವ್ಯಾಪಾರದಲ್ಲಿ ನಿನ್ನ ಅಧಿಕ ಚಾತುರ್ಯದಿಂದಲೂ
6“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
7ಆದ್ದರಿಂದ ಭಯಂಕರ ಜನಾಂಗದವರಾದ ವಿದೇಶಿಯರನ್ನು
8ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು.
9ನಿನ್ನನ್ನು ಕೊಲ್ಲಲು ಬರುವವನ ಮುಂದೆ
10ನೀನು ವಿದೇಶಿಯರ ಕೈಯಿಂದ
A Lament for the King of Tyre Who Was in Eden
11ಯೆಹೋವ ದೇವರ ವಾಕ್ಯವು ಪುನಃ ನನಗೆ ಬಂದಿತು,
12“ಮನುಷ್ಯಪುತ್ರನೇ, ಟೈರಿನ ಅರಸನ ವಿಷಯದಲ್ಲಿ ಶೋಕಗೀತೆಯನ್ನೆತ್ತಿ ಅವನಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
13ದೇವರ ತೋಟವಾದ
14ನೀನು ರಕ್ಷಕ ಕೆರೂಬಿಯಾಗಿ ಅಭಿಷೇಕಹೊಂದಿದೆ.
15ನಿನ್ನ ಸೃಷ್ಟಿಯ ದಿನದಿಂದ
16ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ
17ನೀನು ನಿನ್ನ ಸೌಂದರ್ಯದ ನಿಮಿತ್ತ
18ನಿನ್ನ ಅಪಾರವಾದ ಪಾಪಗಳಿಂದಲೂ ಅನ್ಯಾಯವಾದ ವ್ಯಾಪಾರಗಳಿಂದಲೂ
19ನಿನ್ನನ್ನು ಅರಿತ ಜನರೆಲ್ಲರೂ
Judgment Against Sidon and the Restoration of Israel
20ಯೆಹೋವ ದೇವರ ವಾಕ್ಯವು ನನಗೆ ಬಂದಿತು,
21“ಮನುಷ್ಯಪುತ್ರನೇ, ನೀನು ಸೀದೋನಿಗೆ ಅಭಿಮುಖವಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.
22ನೀನು ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
23ನಾನು ಅದರಲ್ಲಿ ವ್ಯಾಧಿಯನ್ನೂ
24“ ‘ಇಸ್ರಾಯೇಲ್ ವಂಶದವರಿಗೆ ಚುಚ್ಚುವ ಮುಳ್ಳು ಇನ್ನಿರದು, ಹೀನೈಸುವ ನೆರೆಹೊರೆಯವರೆಂಬ ಮುಳ್ಳಿನ ಬಾಧೆ ಇನ್ನಾಗದು. ನಾನೇ ಸಾರ್ವಭೌಮ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.
25“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಜನಾಂಗಗಳಲ್ಲಿ ಚದರಿಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ದಾಸ ಯಾಕೋಬನಿಗೆ ನಾನು ಅನುಗ್ರಹಿಸಿದ ಸ್ವಂತ ನಾಡಿನಲ್ಲಿ ವಾಸಿಸುವರು.
26ಅವರು ನಿರ್ಭಯವಾಗಿ ಅಲ್ಲಿ ವಾಸಿಸುವರು. ಮನೆಗಳನ್ನು ಕಟ್ಟುವರು; ದ್ರಾಕ್ಷಿತೋಟಗಳನ್ನು ನೆಡುವರು. ಹೌದು, ಅವರ ಸುತ್ತಲೂ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯವಾಗಿ ವಾಸಿಸುವರು, ಆಗ ಯೆಹೋವನಾದ ನಾನೇ ಅವರ ದೇವರೆಂದು ತಿಳಿಯುವರು.’ ”
시편 77
A Night Meditation Remembering Ancient Wonders
1ನನ್ನ ಸಹಾಯಕ್ಕಾಗಿ ದೇವರ ಕಡೆಗೆ ಕೂಗುತ್ತೇನೆ.
2ನನ್ನ ಇಕ್ಕಟ್ಟಿನ ದಿವಸದಲ್ಲಿ ಯೆಹೋವ ದೇವರನ್ನು ಹುಡುಕಿದೆನು.
3ನಾನು ವ್ಯಥೆಪಡುತ್ತಿರುವಾಗ, ದೇವರನ್ನು ಜ್ಞಾಪಕಮಾಡಿಕೊಂಡೆನು.
4ನನ್ನ ಕಣ್ಣುಗಳನ್ನು ಮುಚ್ಚದಿರುವಾಗ,
5ಪೂರ್ವದ ದಿವಸಗಳನ್ನೂ
6ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕಮಾಡಿಕೊಂಡೆನು.
7“ನಿರಂತರವಾಗಿ ಯೆಹೋವ ದೇವರು ತಳ್ಳಿಬಿಡುವರೋ?
8ದೇವರ ಒಡಂಬಡಿಕೆಯ ಪ್ರೀತಿಯು ಸದಾಕಾಲಕ್ಕೆ ನಿಂತು ಹೋಯಿತೋ?
9ದೇವರು ಕರುಣಿಸುವುದನ್ನು ಮರೆತು ಬಿಟ್ಟಿದ್ದಾರೋ?
10ನಂತರ ನಾನು ಯೋಚಿಸಿದ್ದೇನಂದರೆ, “ಹೀಗೆ ನೆನಸಿದ್ದು ನನ್ನ ಬಲಹೀನತೆಯೇ.
11ಯೆಹೋವ ದೇವರ ಕ್ರಿಯೆಗಳನ್ನು ಜ್ಞಾಪಕಮಾಡಿಕೊಳ್ಳುವೆನು.
12ನಿಮ್ಮ ಮಹಾಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು,
13ದೇವರೇ, ನಿಮ್ಮ ಮಾರ್ಗಗಳು ಪರಿಶುದ್ಧವಾದವುಗಳು.
14ಅದ್ಭುತಗಳನ್ನು ಮಾಡುವ ದೇವರು ನೀವೇ.
15ಯಾಕೋಬನ ಮತ್ತು ಯೋಸೇಫನ ಸಂತತಿಯವರಾದ
16ಜಲರಾಶಿಗಳು ನಿಮ್ಮನ್ನು ಕಂಡವು.
17ಮೋಡಗಳು ನೀರನ್ನು ಸುರಿಸಿದವು.
18ನಿಮ್ಮ ಗುಡುಗಿನ ಶಬ್ದವು ಸುಂಟರಗಾಳಿಯಲ್ಲಿ ಕೇಳುತ್ತಿತ್ತು.
19ನೀವು ಸಮುದ್ರದಲ್ಲಿ ಮಾರ್ಗಮಾಡಿದಿರಿ.
20ಮೋಶೆ ಆರೋನರ ಕೈಯಿಂದ