简
KO 韩语
EN 英语
CN 中文
JP 日语
PH 菲律宾语族
HI 印地语
BN 孟加拉语
TA 泰米尔语
TE 泰卢固语
ML 马拉雅拉姆语
FA 波斯语
MY 缅甸语
NE 尼泊尔语
MR 马拉地语
KN 卡纳达语
HA 豪萨语
YO 约鲁巴语
SW 斯瓦希里语
IG 伊博语
ID 印度尼西亚语
PT 葡萄牙语
VI 越南语
AR 阿拉伯语
RU 俄语
UK 乌克兰语
RO 罗马尼亚语
IT 意大利语
FI 芬兰语
TO 汤加语
HR 克罗地亚语
SR 塞尔维亚语
TR 土耳其语
HU 匈牙利语
PL 波兰语
SK 斯洛伐克语
LA 拉丁语
NL 荷兰语
CS 捷克语
FR 法语
ES 西班牙语
DE 德语
OT 其他语言
读经确认
你完成了这一天的麦琴读经吗?
点击确认后,会在我的页面麦琴进度表中记录为已完成。
열왕기상 1
David in His Old Age and Abishag the Shunammite
1ಅರಸನಾದ ದಾವೀದನು ವೃದ್ಧನಾಗಿಯೂ, ಬಹಳ ಪ್ರಾಯ ಹೋದವನಾಗಿಯೂ ಇರುವಾಗ, ಅವನ ಮೇಲೆ ಹೊದಿಕೆಗಳನ್ನು ಹಾಕಿದರೂ, ಅವನಿಗೆ ಬೆಚ್ಚಗಾಗುತ್ತಿರಲಿಲ್ಲ.
2ಆದ್ದರಿಂದ ಅವನ ಸೇವಕರು ಅವನಿಗೆ, “ಅರಸ, ನಮ್ಮ ಒಡೆಯನಿಗೋಸ್ಕರ ಕನ್ನಿಕೆಯನ್ನು ಹುಡುಕುವೆವು. ಅವಳು ಅರಸನ ಬಳಿಯಲ್ಲಿ ನಿಂತು, ಅವನನ್ನು ಜೋಪಾನ ಮಾಡಲಿ. ಅರಸನಾದ ನಮ್ಮ ಒಡೆಯನಿಗೆ ಬೆಚ್ಚಗೆ ಆಗುವ ಹಾಗೆ, ಅವನ ಮಗ್ಗುಲಲ್ಲಿ ಅವಳು ಮಲಗಲಿ,” ಎಂದರು.
3ಹಾಗೆಯೇ ಅವರು ಸೌಂದರ್ಯವತಿಯಾದ ಹುಡುಗಿಗೋಸ್ಕರ ಇಸ್ರಾಯೇಲಿನ ಮೇರೆಗಳಲ್ಲೆಲ್ಲಾ ಹುಡುಕಿ, ಶೂನೇಮ್ಯಳಾದ ಅಬೀಷಗ್ ಎಂಬವಳನ್ನು ಕಂಡುಕೊಂಡು, ಅವಳನ್ನು ಅರಸನ ಬಳಿಗೆ ತಂದರು.
4ಈ ಸೌಂದರ್ಯವತಿಯಾದ ಹುಡುಗಿಯು ಅರಸನ ಆರೈಕೆ ಮಾಡುತ್ತಾ, ಅವನ ಸೇವೆ ಮಾಡುತ್ತಿದ್ದಳು. ಅರಸನು ಅವಳೊಂದಿಗೆ ಸಂಪರ್ಕ ಮಾಡಲಿಲ್ಲ.
Adonijah Sets Himself Up as King
5ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು, “ನಾನು ಅರಸನಾಗಿರಬೇಕು,” ಎಂದುಕೊಂಡು, ತನಗೋಸ್ಕರ ರಥಗಳನ್ನೂ, ಸಾರಥಿಯರನ್ನೂ, ತನ್ನ ಮುಂದೆ ಓಡುವುದಕ್ಕೆ ಐವತ್ತು ಮಂದಿ ಪುರುಷರನ್ನೂ ಸಿದ್ಧಮಾಡಿದನು.
6ಅವನ ತಂದೆಯು ಎಂದಾದರೂ, “ನೀನು ಹೀಗೆ ಏಕೆ ಮಾಡಿದೆ?” ಎಂದು ಹೇಳಿ ಅವನನ್ನು ಗದರಿಸಲಿಲ್ಲ. ಅವನು ಬಹು ಒಳ್ಳೆಯ ರೂಪವಂತನಾಗಿದ್ದನು. ಅಬ್ಷಾಲೋಮನ ತರುವಾಯ ಅವನ ತಾಯಿ ಅವನನ್ನು ಹೆತ್ತಳು.
7ಅದೋನೀಯನು ಚೆರೂಯಳ ಮಗ ಯೋವಾಬ, ಯಾಜಕ ಅಬಿಯಾತರನ ಜೊತೆ ಸೇರಿ ಮಾತುಕತೆ ಮಾಡಿದನು. ಅವರು ಅದೋನೀಯನನ್ನು ಹಿಂಬಾಲಿಸಿ, ಅವನಿಗೆ ಸಹಾಯಕರಾಗಿದ್ದರು.
8ಆದರೆ ಯಾಜಕನಾದ ಚಾದೋಕನೂ, ಯೆಹೋಯಾದಾವನ ಮಗ ಬೆನಾಯನೂ, ಪ್ರವಾದಿಯಾದ ನಾತಾನನೂ, ಶಿಮ್ಮಿಯೂ, ರೇಯಿಯೂ, ದಾವೀದನ ಪರಾಕ್ರಮಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.
9ಅದೋನೀಯನು ಏನ್ ರೋಗೆಲಿನ ಬಳಿಯಲ್ಲಿರುವ ಚೋಹೆಲೆತ್ ಎಂಬ ಕಲ್ಲಿನ ಹತ್ತಿರ ಕುರಿಗಳನ್ನೂ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳಾದ ತನ್ನ ಸಮಸ್ತ ಸಹೋದರರನ್ನೂ, ಅರಸನ ಸೇವಕರಾದ ಸಮಸ್ತ ಯೆಹೂದದ ಜನರನ್ನೂ ಔತಣಕ್ಕೆ ಕರೆದನು.
10ಆದರೆ ಪ್ರವಾದಿಯಾದ ನಾತಾನನನ್ನೂ, ಬೆನಾಯನನ್ನೂ, ಪರಾಕ್ರಮಶಾಲಿಗಳನ್ನೂ, ತನ್ನ ಸಹೋದರನಾದ ಸೊಲೊಮೋನನನ್ನೂ ಕರೆಯಲಿಲ್ಲ.
The Counsel of Nathan and Bathsheba
11ಆಗ ನಾತಾನನು ಸೊಲೊಮೋನನ ತಾಯಿ ಬತ್ಷೆಬೆಳಿಗೆ, “ನಮ್ಮ ಒಡೆಯ ದಾವೀದನು ಅರಿಯದಿರುವಾಗ, ಹಗ್ಗೀತಳ ಮಗ ಅದೋನೀಯನು ಅರಸನಾಗಿದ್ದಾನೆ, ಎಂದು ನೀನು ಕೇಳಲಿಲ್ಲವೋ?
12ಆದ್ದರಿಂದ ನೀನು ನಿನ್ನ ಪ್ರಾಣವನ್ನೂ, ನಿನ್ನ ಮಗ ಸೊಲೊಮೋನನ ಪ್ರಾಣವನ್ನೂ ರಕ್ಷಿಸಿಕೊಳ್ಳುವ ಹಾಗೆ ಅಪ್ಪಣೆಯಾದರೆ, ನಿನಗೆ ಆಲೋಚನೆ ಹೇಳುತ್ತೇನೆ.
13ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ಅರಸನಾದ ನನ್ನ ಒಡೆಯನೇ, “ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ, ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ,” ನೀವು ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವುದು ಏಕೆ?’ ಎಂದು ಕೇಳು.
14ನೀನು, ಇನ್ನೂ ಅರಸನ ಸಂಗಡ ಮಾತನಾಡುತ್ತಿರುವಾಗ, ನಾನು ನಿನ್ನ ಹಿಂದೆಯೇ ಒಳಗೆ ಬಂದು, ನಿನ್ನ ಮಾತುಗಳನ್ನು ಸ್ಥಿರಮಾಡುವೆನು,” ಎಂದನು.
15ಆಗ ಬತ್ಷೆಬೆಳು ಬಹು ವೃದ್ಧನಾಗಿದ್ದ ದಾವೀದನನ್ನು ನೋಡಲು ಅರಸನ ಕೊಠಡಿಯೊಳಗೆ ಹೋದಳು. ಅಲ್ಲಿ ಶೂನೇಮ್ಯಳಾದ ಅಬೀಷಗ್ ಅರಸನಿಗೆ ಸೇವೆಮಾಡುತ್ತಾ ಇದ್ದಳು.
16ಆಗ ಬತ್ಷೆಬೆಳು ಅರಸನಿಗೆ ಬಾಗಿ ನಮಸ್ಕರಿಸಿದಳು.
17ಆಕೆಯು ಅರಸನಿಗೆ, “ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ಮಗ ಸೊಲೊಮೋನನು ಆಳುವನೆಂದೂ, ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ, ನೀವು ನಿನ್ನ ದಾಸಿಗೆ ನಿನ್ನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದಿರಿ.
18ಆದರೆ, ಅರಸನಾಗಿರುವ ನನ್ನ ಒಡೆಯನಾದ ನೀವು ಅರಿಯದೆ ಇರುವಾಗ, ಅದೋನೀಯನು ರಾಜನಾಗಿಬಿಟ್ಟಿದ್ದಾನೆ.
19ಇದಲ್ಲದೆ ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಬಲಿಯಾಗಿ ಅರ್ಪಿಸಿದ್ದಾನೆ, ಅರಸನ ಮಕ್ಕಳೆಲ್ಲರನ್ನೂ, ಯಾಜಕನಾದ ಅಬಿಯಾತರನನ್ನೂ, ಸೇನಾಧಿಪತಿ ಯೋವಾಬನನ್ನೂ ಔತಣಕ್ಕೆ ಕರೆದಿದ್ದಾನೆ. ಆದರೆ ನಿನ್ನ ಸೇವಕನಾದ ಸೊಲೊಮೋನನನ್ನು ಅವನು ಕರೆಯಲಿಲ್ಲ.
20ಆದ್ದರಿಂದ ಅರಸನಾದ ನನ್ನ ಒಡೆಯನೇ, ನಿಮ್ಮ ತರುವಾಯ ನನ್ನ ಒಡೆಯನಾದ ಅರಸನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನು ಯಾರೆಂದು ನೀವು ಹೇಳುವ ಹಾಗೆ, ಸಮಸ್ತ ಇಸ್ರಾಯೇಲರ ಕಣ್ಣುಗಳು ನಿಮ್ಮ ಮೇಲೆ ಇರುತ್ತವೆ.
21ಇಲ್ಲದಿದ್ದರೆ ನನ್ನ ಒಡೆಯನೂ ಅರಸನೂ ತನ್ನ ಪಿತೃಗಳ ಸಂಗಡ ಸಮಾಧಿ ಸೇರಿದಾಗ, ನಾನೂ, ನನ್ನ ಮಗ ಸೊಲೊಮೋನನೂ ಅಪರಾಧಿಗಳಾಗಿ ಎಣಿಕೆಯಾಗುವೆವು,” ಎಂದಳು.
22ಅವಳು ಅರಸನ ಸಂಗಡ ಇನ್ನೂ ಮಾತನಾಡುತ್ತಿರುವಾಗ, ಪ್ರವಾದಿಯಾದ ನಾತಾನನು ಬಂದನು.
23ಆಗ ಅರಸನಿಗೆ, “ಪ್ರವಾದಿಯಾದ ನಾತಾನನು,” ಎಂದರು. ಅವನು ಒಳಗೆ ಅರಸನ ಮುಂದೆ ಬಂದಾಗ, ಮೋರೆ ಕೆಳಗಾಗಿ ನೆಲಕ್ಕೆ ಅಡ್ಡಬಿದ್ದನು.
24ಆಗ ನಾತಾನನು, “ಅರಸನಾದ ನನ್ನ ಒಡೆಯನೇ, ಅದೋನೀಯನು, ನನ್ನ ತರುವಾಯ ಆಳುವನೆಂದೂ, ನನ್ನ ಸಿಂಹಾಸನ ಮೇಲೆ ಕುಳಿತುಕೊಳ್ಳುವನೆಂದೂ, ನೀವು ಹೇಳಿದ್ದು ಹೌದೋ?
25ಏಕೆಂದರೆ ಈ ಹೊತ್ತು ಅವನು ಇಳಿದು ಹೋಗಿ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳೆಲ್ಲರನ್ನೂ, ಸೈನ್ಯಾಧಿಪತಿಗಳನ್ನೂ, ಯಾಜಕನಾದ ಅಬಿಯಾತರನನ್ನೂ ಕರೆದಿದ್ದಾನೆ. ಅವರು ಅವನ ಮುಂದೆ ತಿಂದು, ಕುಡಿದು, ‘ಅರಸನಾದ ಅದೋನೀಯನು ಚಿರಂಜೀವಿಯಾಗಿರಲಿ,’ ಎಂದು ಹೇಳುತ್ತಿದ್ದಾರೆ.
26ಆದರೆ ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ, ನಿಮ್ಮ ಸೇವಕನಾದ ಸೊಲೊಮೋನನನ್ನೂ, ಅವನು ಕರೆಯಲೇ ಇಲ್ಲ.
27ಅರಸನಾದ ನನ್ನ ಒಡೆಯನಿಂದ ಈ ಕಾರ್ಯವಾಯಿತೋ? ಅರಸನಾದ ನನ್ನ ಒಡೆಯನು, ತನ್ನ ತರುವಾಯ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನು ಯಾರೆಂದು ನಿಮ್ಮ ಸೇವಕನಾದ ನನಗೆ ನೀವು ತಿಳಿಸದೆ ಹೋದಿರೋ?” ಎಂದನು.
David Commands That Solomon Be Made King
28ಆಗ ಅರಸನಾದ ದಾವೀದನು ಉತ್ತರವಾಗಿ, “ಬತ್ಷೆಬೆಳನ್ನು ನನ್ನ ಬಳಿಗೆ ಕರೆಯಿರಿ,” ಎಂದನು. ಅವಳು ಅರಸನ ಸನ್ನಿಧಾನಕ್ಕೆ ಬಂದು ಅರಸನ ಮುಂದೆ ನಿಂತಳು.
29ಅರಸನು ಆಕೆಗೆ, “ನಿಶ್ಚಯವಾಗಿ, ನಿನ್ನ ಮಗ ಸೊಲೊಮೋನನು ನನ್ನ ತರುವಾಯ ಆಳುವನೆಂದೂ,
30ಅವನು ನನಗೆ ಬದಲಾಗಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ನಿನಗೆ ಹೇಗೆ ಆಣೆ ಇಟ್ಟು ಹೇಳಿದೆನೋ ಹಾಗೆಯೇ, ಈ ದಿನ ನಿಶ್ಚಯವಾಗಿ ಮಾಡುವೆನೆಂದೂ ಸಮಸ್ತ ಇಕ್ಕಟ್ಟಿನೊಳಗಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಯೆಹೋವ ದೇವರ ಮೇಲೆ ಆಣೆ ಇಡುತ್ತೇನೆ,” ಎಂದೂ ಪ್ರಮಾಣವಾಗಿ ಹೇಳಿದನು.
31ಬತ್ಷೆಬೆಳು ಮುಖವನ್ನು ನೆಲಕ್ಕೆ ಬಗ್ಗಿಸಿ, ಅರಸನನ್ನು ವಂದಿಸಿ, “ನನ್ನ ಒಡೆಯನೂ, ಅರಸನೂ ಆದ ದಾವೀದನು ಎಂದೆಂದಿಗೂ ಬದುಕಲಿ,” ಎಂದಳು.
32ಆಗ ಅರಸನಾದ ದಾವೀದನು, “ಯಾಜಕನಾದ ಚಾದೋಕನನ್ನೂ, ಪ್ರವಾದಿಯಾದ ನಾತಾನನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ ನನ್ನ ಬಳಿಗೆ ಕರೆಯಿರಿ,” ಎಂದನು. ಅವರು ಅರಸನ ಸಮ್ಮುಖಕ್ಕೆ ಬಂದರು.
33ಅರಸನು ಅವರಿಗೆ, “ನೀವು ನಿಮ್ಮ ಯಜಮಾನನ ಸೇವಕರನ್ನು ಕರೆದುಕೊಂಡು ಹೋಗಿ ನನ್ನ ಮಗ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಅವನನ್ನು ಕರೆದುಕೊಂಡು ಹೋಗಿರಿ.
34ಅಲ್ಲಿ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕಿಸಲಿ. ತುತೂರಿಯನ್ನು ಊದಿ, ‘ಅರಸ ಸೊಲೊಮೋನನು ಚಿರಂಜೀವಿಯಾಗಿರಲಿ!’ ಎಂದು ಘೋಷಿಸಿರಿ.
35ಆಗ ಅವನು ಬಂದು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಹಾಗೆ, ನೀವು ಅವನ ಹಿಂದೆ ಬನ್ನಿರಿ. ಏಕೆಂದರೆ ಅವನು ನನಗೆ ಬದಲಾಗಿ ಅರಸನಾಗಿರುವನು. ಇಸ್ರಾಯೇಲಿನ ಮೇಲೆಯೂ, ಯೆಹೂದದ ಮೇಲೆಯೂ, ನಾಯಕನಾಗಿರಲು ನಾನು ಅವನನ್ನು ನೇಮಿಸಿದ್ದೇನೆ,” ಎಂದನು.
36ಯೆಹೋಯಾದಾವನ ಮಗ ಬೆನಾಯನು ಅರಸನಿಗೆ ಉತ್ತರವಾಗಿ, “ಆಮೆನ್, ಅರಸನಾದ ನನ್ನ ಒಡೆಯನ ದೇವರಾದ ಯೆಹೋವ ದೇವರು ಹಾಗೆಯೇ ಹೇಳಲಿ.
37ಯೆಹೋವ ದೇವರು ಅರಸನಾದ ನನ್ನ ಒಡೆಯನ ಸಂಗಡ ಹೇಗೆ ಇದ್ದರೋ, ಹಾಗೆಯೇ ಸೊಲೊಮೋನನ ಸಂಗಡ ಇದ್ದು, ನನ್ನ ಒಡೆಯನೂ, ಅರಸನೂ ಆದ ದಾವೀದನ ಸಿಂಹಾಸನಕ್ಕಿಂತ ಇವನ ಸಿಂಹಾಸನವನ್ನು ಅಧಿಕವಾಗಿ ಮಾಡಲಿ,” ಎಂದನು.
38ಆಗ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ, ಯೆಹೋಯಾದಾವನ ಮಗ ಬೆನಾಯನೂ, ಕೆರೇತ್ಯರೂ, ಪೆಲೇತ್ಯರೂ ಹೋಗಿ, ಸೊಲೊಮೋನನನ್ನು ಅರಸನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನಿಗೆ ಕರೆತಂದರು.
39ಆಗ ಯಾಜಕನಾದ ಚಾದೋಕನು ಗುಡಾರದೊಳಗಿಂದ ತೈಲದ ಕೊಂಬನ್ನು ತಂದು ಸೊಲೊಮೋನನನ್ನು ಅಭಿಷೇಕಿಸಿದನು. ಅವರು ತುತೂರಿಯನ್ನು ಊದಿದರು. ಆಗ ಜನರೆಲ್ಲರು, “ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ,” ಎಂದರು.
40ಇದಲ್ಲದೆ ಜನರೆಲ್ಲರೂ ಅವನನ್ನು ಹಿಂಬಾಲಿಸಿದರು. ಜನರು ಕೊಳಲು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.
Adonijah Flees in Fear and Grasps the Horns of the Altar
41ಆಗ ಅದೋನೀಯನೂ, ಅವನ ಸಂಗಡ ಕರೆಹೊಂದಿದವರೂ ತಿಂದು, ತೀರಿಸಿದಾಗ ಅದನ್ನು ಕೇಳಿದರು. ಯೋವಾಬನು ತುತೂರಿಯ ಶಬ್ದವನ್ನು ಕೇಳಿದಾಗ, “ಪಟ್ಟಣದಲ್ಲಿ ಗದ್ದಲದ ಶಬ್ದವೇಕೆ?” ಎಂದನು.
42ಅವನು ಇನ್ನೂ ಮಾತನಾಡುತ್ತಿರುವಾಗ, ಯಾಜಕನಾಗಿರುವ ಅಬಿಯಾತರನ ಮಗ ಯೋನಾತಾನನು ಬಂದನು. ಅದೋನೀಯನು ಅವನಿಗೆ, “ಒಳಗೆ ಬಾ. ಏಕೆಂದರೆ ನೀನು ಯೋಗ್ಯ ಮನುಷ್ಯನೂ, ಒಳ್ಳೆಯ ಸಮಾಚಾರ ತರುವವನೂ ಆಗಿರುತ್ತೀ?” ಎಂದನು.
43ಆಗ ಯೋನಾತಾನನು ಅದೋನೀಯನಿಗೆ, ನಿಶ್ಚಯವಾಗಿ ಒಳ್ಳೆಯ ಸಮಾಚಾರವಲ್ಲ! “ನಮ್ಮ ಒಡೆಯನೂ ಅರಸನೂ ಆಗಿರುವ ದಾವೀದನು ಸೊಲೊಮೋನನನ್ನು ಅರಸನಾಗಿ ಮಾಡಿದ್ದಾನೆ.
44ಇದಲ್ಲದೆ ಅರಸನು ಅವನ ಸಂಗಡ ಯಾಜಕನಾದ ಚಾದೋಕನನ್ನೂ, ಪ್ರವಾದಿ ನಾತಾನನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ, ಕೆರೇತ್ಯರನ್ನೂ, ಪೆಲೇತ್ಯರನ್ನೂ ಕಳುಹಿಸಿದ್ದಾನೆ. ಅವರು ಅವನನ್ನು ಅರಸನ ಹೇಸರಕತ್ತೆಯ ಮೇಲೆ ಕೂಡಿಸಿಕೊಂಡು ಹೋಗಿ,
45ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಸೊಲೊಮೋನನನ್ನು ಗೀಹೋನಿನಲ್ಲಿ ಅರಸನಾಗಿರಲು ಅಭಿಷೇಕಿಸಿದ್ದಾರೆ. ಅವರು ಸಂತೋಷಪಡುತ್ತಾ ಅಲ್ಲಿಂದ ಬಂದ ಕಾರಣ ಪಟ್ಟಣವು ಗದ್ದಲವಾಯಿತು. ನೀವು ಕೇಳುವ ಆರ್ಭಟವು ಇದೇ.
46ಇದಲ್ಲದೆ ಸೊಲೊಮೋನನು ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ.
47ಇದರ ಹೊರತು ಅರಸನ ಸೇವಕರೂ, ನಮ್ಮ ಯಜಮಾನನೂ, ಅರಸನೂ ಆದ ದಾವೀದನನ್ನು ಆಶೀರ್ವದಿಸಲು ಬಂದು, ‘ದೇವರು ಸೊಲೊಮೋನನ ಹೆಸರನ್ನು ನಿಮ್ಮ ಹೆಸರಿಗಿಂತಲೂ ಪ್ರಸಿದ್ಧ ಮಾಡಲಿ. ಅವನ ಸಿಂಹಾಸನವನ್ನು ನಿಮ್ಮ ಸಿಂಹಾಸನಕ್ಕಿಂತ ದೊಡ್ಡದಾಗಿ ಮಾಡಲಿ,’ ಎಂದೂ ಹೇಳುತ್ತಿರುವಾಗ, ಅರಸನು ಮಂಚದ ಮೇಲೆ ಬಾಗಿ,
48‘ಕಣ್ಣುಗಳು ನೋಡುತ್ತಿರುವಾಗ ಇಂದು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಉತ್ತರಾಧಿಕಾರಿಯನ್ನು ನನಗೆ ಕೊಟ್ಟಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ,’ ಎಂದು ಹೇಳಿದ್ದಾರೆ,” ಎಂದನು.
49ಆಗ ಅದೋನೀಯನ ಸಂಗಡ ಔತಣಕ್ಕೆ ಬಂದಿದ್ದ ಎಲ್ಲರೂ ಹೆದರಿಕೊಂಡು ಎದ್ದು, ತಮ್ಮ ತಮ್ಮ ಸ್ಥಳಗಳಿಗೆ ಹೊರಟು ಹೋದರು.
50ಆದರೆ ಅದೋನೀಯನು ಸೊಲೊಮೋನನಿಗೆ ಭಯಪಟ್ಟದ್ದರಿಂದ ಎದ್ದು ಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದುಕೊಂಡನು.
51ಆಗ ಒಬ್ಬನು ಅರಸನಾದ ಸೊಲೊಮೋನನಿಗೆ, “ಅದೋನೀಯನು, ನಿನಗೆ ಭಯಪಡುತ್ತಾನೆ. ಏಕೆಂದರೆ ಇಗೋ, ಅವನು ಬಲಿಪೀಠದ ಕೊಂಬುಗಳನ್ನು ಹಿಡಿದು, ‘ಅರಸನಾದ ಸೊಲೊಮೋನನು ಖಡ್ಗದಿಂದ ತನ್ನ ಸೇವಕನನ್ನು ಕೊಲ್ಲುವುದಿಲ್ಲವೆಂದು ಈ ಹೊತ್ತು ನನಗೆ ಆಣೆ ಇಡಲಿ,’ ಎಂದು ಹೇಳುತ್ತಾನೆ,” ಎಂದನು.
52ಅದಕ್ಕೆ ಸೊಲೊಮೋನನು, “ಅವನು ಉತ್ತಮನಾಗಿ ನಡೆಯುವುದಾದರೆ, ಅವನ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳದು. ಆದರೆ ಅವನಲ್ಲಿ ಕೆಟ್ಟತನವು ಸಿಕ್ಕಿದರೆ ಅವನು ಸಾಯುವನು,” ಎಂದನು.
53ಅರಸನಾದ ಸೊಲೊಮೋನನು ಅವನನ್ನು ಕರೆಸಿದಾಗ, ಬಲಿಪೀಠದ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಆಗ ಅವನು ಬಂದು ಅರಸನಾದ ಸೊಲೊಮೋನನಿಗೆ ಅಡ್ಡಬಿದ್ದನು. ಸೊಲೊಮೋನನು ಅವನಿಗೆ, “ನಿನ್ನ ಮನೆಗೆ ಹೋಗು,” ಎಂದನು.
갈라디아서 5
Keep the Freedom Christ Has Given
1ಕ್ರಿಸ್ತ ಯೇಸು ನಮ್ಮನ್ನು ಸ್ವತಂತ್ರಕ್ಕಾಗಿಯೇ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಸ್ಥಿರವಾಗಿ ನಿಲ್ಲಿರಿ. ನೀವು ನಿಯಮದ ದಾಸತ್ವದ ನೊಗದಲ್ಲಿ ಪುನಃ ಸಿಕ್ಕಿಕೊಳ್ಳಬೇಡಿರಿ.
2ಇಗೋ, ಪೌಲನೆಂಬ ನಾನು ನಿಮಗೆ ಹೇಳುವುದೇನೆಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ, ಕ್ರಿಸ್ತ ಯೇಸುವಿನ ಮುಖಾಂತರ ನಿಮಗೆ ಏನೂ ಪ್ರಯೋಜನವಾಗುವುದಿಲ್ಲ.
3ಸುನ್ನತಿ ಮಾಡಿಸಿಕೊಳ್ಳಲು ಬಯಸುವ ಪ್ರತಿಯೊಬ್ಬನೂ ನಿಯಮವನ್ನೆಲ್ಲಾ ಕೈಗೊಳ್ಳುವ ಹಂಗಿನಲ್ಲಿದ್ದಾನೆ ಎಂದು ಪುನಃ ದೃಢವಾಗಿ ಹೇಳುತ್ತೇನೆ.
4ನೀವು ನಿಯಮದ ಮೂಲಕ ನೀತಿವಂತರಾಗಬೇಕೆಂದು ಪ್ರಯತ್ನಿಸುವವರು, ಕ್ರಿಸ್ತ ಯೇಸುವಿನಿಂದ ಬೇರ್ಪಟ್ಟಿದ್ದೀರಿ. ನೀವು ಕೃಪೆಯಿಂದ ಬಿದ್ದವರಾಗಿದ್ದೀರಿ.
5ನಾವಾದರೋ ನಂಬಿಕೆಯಿಂದ ನೀತಿವಂತರಾಗುವ ನಮ್ಮ ನಿರೀಕ್ಷೆಯನ್ನು ದೇವರ ಆತ್ಮನ ಮೂಲಕ ಆತುರದಿಂದ ಎದುರುನೋಡುತ್ತಿದ್ದೇವೆ.
6ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಸುನ್ನತಿ ಆಗದಿದ್ದರೂ ಯಾವ ವ್ಯತ್ಯಾಸವಿರುವುದಿಲ್ಲ. ಆದರೆ ಪ್ರೀತಿಯಿಂದ ಕಾರ್ಯ ನಡೆಸುವ ನಂಬಿಕೆಯು ಮಾತ್ರ ಪ್ರಯೋಜನವಾಗಿರುತ್ತದೆ.
7ನೀವು ಚೆನ್ನಾಗಿ ಓಡುತ್ತಿದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗದಂತೆ ನಿಮ್ಮನ್ನು ತಡೆದವರು ಯಾರು?
8ಈ ಪ್ರೇರಣೆಯು ನಿಮ್ಮನ್ನು ಕರೆದ ದೇವರಿಂದ ಬಂದದ್ದಲ್ಲ.
9ಸ್ವಲ್ಪ ಹುಳಿಯು ಹಿಟ್ಟನ್ನೆಲ್ಲಾ ಹುಳಿಮಾಡುವುದು.
10ನೀವು ಬೇರೆ ರೀತಿಯಿಂದ ಯೋಚಿಸುವುದಿಲ್ಲವೆಂದು ಕರ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತು ನನಗೆ ಭರವಸೆ ಇದೆ. ಆದರೆ ನಿಮ್ಮನ್ನು ತೊಂದರೆ ಪಡಿಸುವವನು ಯಾವನಾದರೂ ಸರಿ, ಅವನು ದಂಡನೆಯನ್ನು ಅನುಭವಿಸುವನು.
11ಆದರೆ ಪ್ರಿಯರೇ, ನಾನು ಸುನ್ನತಿಯಾಗಬೇಕೆಂದು ಇನ್ನೂ ಬೋಧಿಸುವವನಾಗಿದ್ದರೆ, ಈಗಲೂ ನನಗೆ ಹಿಂಸೆಯಾಗುತ್ತಿರುವುದು ಏಕೆ? ಹಾಗಾದರೆ ಶಿಲುಬೆಯ ಸಂದೇಶ ಸಾರುವುದರಿಂದ ಯಾವ ಆತಂಕವೂ ಉಂಟಾಗುತ್ತಿರಲಿಲ್ಲವಲ್ಲಾ?
12ನಿಮ್ಮನ್ನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ತೊಂದರೆ ಪಡಿಸುವವರಿಗೆ ಆ ಅಂಗಚ್ಛೇದವನ್ನಾದರೂ ಮಾಡಿಕೊಂಡರೆ ಲೇಸು ಎಂದು ಬಯಸುತ್ತೇನೆ!
Serve One Another in Love
13ಪ್ರಿಯರೇ, ನೀವು ಸ್ವಾತಂತ್ರ್ಯಕ್ಕಾಗಿ ಕರೆಹೊಂದಿದವರು. ಆದರೆ ಆ ಸ್ವಾತಂತ್ರ್ಯವನ್ನು ಶಾರೀರಿಕ ಅನುಕೂಲಕ್ಕಾಗಿ ಉಪಯೋಗಿಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ದೀನರಾಗಿ ಸೇವೆಮಾಡಿರಿ.
14ಏಕೆಂದರೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ನಿಯಮವೆಲ್ಲಾ ಅಡಕವಾಗಿದೆ.
15ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.
The Works of the Flesh and the Fruit of the Spirit
16ನಾನು ಹೇಳುವುದೇನೆಂದರೆ, ಪವಿತ್ರಾತ್ಮರ ನಡೆಸುವಿಕೆಯಿಂದ ಬಾಳಿರಿ, ಆಗ ನೀವು ದೈಹಿಕ ಆಸೆಗಳನ್ನು ಎಂದೂ ಪೂರೈಸಲಾರಿರಿ.
17ಏಕೆಂದರೆ ಮಾಂಸಭಾವವು ಆತ್ಮನಿಗೆ ವಿರುದ್ಧವಾಗಿಯೂ ಆತ್ಮನು ಮಾಂಸಭಾವಕ್ಕೆ ವಿರುದ್ಧವಾಗಿಯೂ ಆಶಿಸುತ್ತದೆ. ನೀವು ಮಾಡಬಯಸುವುದನ್ನು ಮಾಡದಂತೆ ಇವು ಒಂದಕ್ಕೊಂದು ವಿರೋಧವಾಗಿವೆ.
18ಆದರೆ ನೀವು ದೇವರ ಆತ್ಮದಿಂದ ನಡೆಸಿಕೊಳ್ಳುವವರಾದರೆ, ನಿಯಮದ ಅಧೀನತೆಯಲ್ಲಿ ಇರುವವರಲ್ಲ.
19ಮಾಂಸಭಾವದ ಕೃತ್ಯಗಳು ಹೀಗೆ ಸ್ಪಷ್ಟವಾಗಿವೆ: ಜಾರತ್ವ, ಅಶುದ್ಧತ್ವ, ಸಡಿಲ ಜೀವನ,
20ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಸ್ವಾರ್ಥತ್ವ, ವಿರೋಧತ್ವ, ಭಿನ್ನತೆ,
21ಮತ್ಸರ, ಕುಡಿಕತನ, ದುಂದೌತಣ ಈ ಮೊದಲಾದವುಗಳೇ. ಇಂಥ ಕೃತ್ಯಗಳನ್ನು ನಡೆಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂದು ನಾನು ನಿಮಗೆ ಮುಂಚೆಯೇ ಹೇಳಿದಂತೆ ಈಗಲೂ ಹೇಳುತ್ತೇನೆ.
22ಪವಿತ್ರಾತ್ಮರ ಫಲವೇನೆಂದರೆ: ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ,
23ಸಾತ್ವಿಕತೆ, ಸಂಯಮ ಇಂಥವುಗಳೇ. ಇವುಗಳಿಗೆ ವಿರೋಧವಾಗಿ ಯಾವ ನಿಯಮವೂ ಇಲ್ಲ.
24ಕ್ರಿಸ್ತ ಯೇಸುವಿನವರು ತಮ್ಮ ಮಾಂಸಭಾವವನ್ನೂ ಅದರ ಆಶೆ ಹಾಗೂ ಅಪೇಕ್ಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದ್ದಾರೆ.
25ನಾವು ದೇವರ ಆತ್ಮದಿಂದ ಜೀವಿಸುತ್ತಿರಲಾಗಿ ಆತ್ಮರನ್ನನುಸರಿಸಿ ನಡೆಯೋಣ.
26ನಾವು ಅಹಂಕಾರಿಗಳಾಗಿರಬಾರದು. ಒಬ್ಬರನ್ನೊಬ್ಬರು ಕೆಣಕದೆಯೂ ಒಬ್ಬರ ಮೇಲೊಬ್ಬರು ಮತ್ಸರಗೊಳ್ಳದೆಯೂ ಇರೋಣ.
에스겔 32
A Lament for Egypt, the Sea Monster Caught in the Net
1ಹನ್ನೆರಡನೆಯ ವರ್ಷದ, ಹನ್ನೆರಡನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
2“ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನ ವಿಷಯವಾಗಿ ಪ್ರಲಾಪವನ್ನೆತ್ತಿ ಅವನಿಗೆ ಹೇಳಬೇಕಾದದ್ದೇನೆಂದರೆ:
3“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
4ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು.
5ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ,
6ನಾನು ನಿನ್ನ ರಕ್ತ ಪ್ರವಾಹದಿಂದ
7ಇದಲ್ಲದೆ, ನಾನು ನಿನ್ನನ್ನು ನಂದಿಸುವಾಗ ಆಕಾಶಕ್ಕೆ ಮುಸುಕುಹಾಕಿ
8ಆಕಾಶದಲ್ಲಿ ಪ್ರಕಾಶಿಸುವ ಬೆಳಕುಗಳನ್ನು
9ಜನಾಂಗಗಳೊಳಗೆ ನೀನು ಅರಿಯದ ದೇಶಗಳಲ್ಲಿ,
10ನಾನು ಅನೇಕ ಜನರನ್ನು ನಿನ್ನ ವಿಷಯದಲ್ಲಿ
11“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
12ಪರಾಕ್ರಮಶಾಲಿಗಳ ಖಡ್ಗಗಳಿಂದ
13ನಾನು ಆ ಬಹು ಪ್ರವಾಹಗಳ ಬಳಿಯಲ್ಲಿರುವ
14ಆಮೇಲೆ ನಾನು ಆ ನೀರುಗಳನ್ನು ಆಳವಾಗಿ ಮಾಡುವೆನು.
15ನಾನು ಈಜಿಪ್ಟ್ ದೇಶವನ್ನು ಹಾಳು ಮಾಡಿ
16“ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ. ಈಜಿಪ್ಟಿನ ವಿಷಯವಾಗಿಯೂ ಅದರ ಎಲ್ಲಾ ಜನಸಮೂಹದ ವಿಷಯವಾಗಿಯೂ ಜನಾಂಗಗಳ ಪುತ್ರಿಯರು ಇದನ್ನು ಕುರಿತು ಗೋಳಾಡುವರು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
Egypt and the Hordes of Nations Gone Down to the Pit
17ಇದಲ್ಲದೆ ಹನ್ನೆರಡನೆಯ ವರ್ಷದ, ತಿಂಗಳಿನ ಹದಿನೈದನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ:
18“ಮನುಷ್ಯಪುತ್ರನೇ, ಈಜಿಪ್ಟಿನ ಜನಸಮೂಹದ ವಿಷಯವಾಗಿ ಗೋಳಾಡು; ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಪುತ್ರಿಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಕೆಯೊಳಗೆ ಇಳಿಯುವವರ ಜೊತೆ ತಳ್ಳಿಬಿಡು.
19‘ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವೆ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು.’
20ಅವರು ಖಡ್ಗದಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಖಡ್ಗವನ್ನು ಎಳೆಯಲಾಗುತ್ತದೆ. ಅವಳನ್ನು ತನ್ನ ಎಲ್ಲಾ ಗುಂಪುಗಳೊಂದಿಗೆ ಎಳೆದುಕೊಂಡು ಹೋಗಲಿ.
21ಸತ್ತವರ ಕ್ಷೇತ್ರದೊಳಗಿಂದ ಪ್ರಬಲ ನಾಯಕರು ಈಜಿಪ್ಟ್ ಮತ್ತು ಅವಳ ಮಿತ್ರರಾಷ್ಟ್ರಗಳ ಬಗ್ಗೆ ಹೇಳುವರು, ‘ಅವರು ಇಳಿದು ಹೋಗಿ ಸುನ್ನತಿಯಿಲ್ಲದವರಾಗಿ ಮತ್ತು ಖಡ್ಗದಿಂದ ಹತರಾಗಿ ಮಲಗಿದ್ದಾರೆ.’
22“ಅಲ್ಲಿ ಅಸ್ಸೀರಿಯ ಮತ್ತು ಅದರ ಎಲ್ಲಾ ಗುಂಪು ಇರುವುದು. ಅಸ್ಸೀರಿಯದ ಸುತ್ತಲೂ ಖಡ್ಗದಿಂದ ಹತರಾದವರ ಸಮಾಧಿಗಳಿರುವುವು;
23ಅವರ ಸಮಾಧಿಗಳು ಕುಳಿಯ ಕಡೆಗಳಲ್ಲಿ ಇಡಲಾಗಿವೆ. ಅವಳ ಸೇನೆಯು ಸಮಾಧಿಯ ಸುತ್ತಲೂ ಇವೆ. ಜೀವಿತರ ದೇಶದಲ್ಲಿ ಭಯವನ್ನು ಹರಡಿದವರೆಲ್ಲರೂ ಖಡ್ಗದಿಂದ ಹತರಾದರು.
24“ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ. ಅವರೆಲ್ಲರೂ ಖಡ್ಗದಿಂದ ಹತರಾದವರೇ. ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದು ಹೋದವರೇ. ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
25ಅವರು ಅವರ ಎಲ್ಲಾ ಸಮೂಹಕ್ಕೂ ಹತರಾದವರ ಮಧ್ಯದಲ್ಲಿ ಹಾಸಿಗೆ ಹಾಕಿದ್ದಾರೆ. ಅದರ ಸುತ್ತಲೂ ಅವರ ಸಮಾಧಿಗಳಿವೆ. ಅವರೆಲ್ಲರೂ ಸುನ್ನತಿಯಿಲ್ಲದವರಾಗಿ ಮತ್ತು ಖಡ್ಗದಿಂದ ಹತರಾಗಿದ್ದಾರೆ. ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಕುಳಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡು ಹತರಾದವರ ಮಧ್ಯದಲ್ಲಿ ಇಡಲಾಗಿದೆ.
26“ಅಲ್ಲಿ ಮೆಷೆಕೂ ತೂಬಲೂ ಮತ್ತು ಅದರ ಎಲ್ಲಾ ಸಮೂಹವೂ ಅದರ ಸಮಾಧಿಗಳೂ ಅದರ ಸುತ್ತಲಾಗಿ ಇವೆ. ಇವರೆಲ್ಲರೂ ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಸುನ್ನತಿಯಿಲ್ಲದೆ ಖಡ್ಗದಿಂದ ಹತರಾದವರು.
27ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತಹ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಖಡ್ಗಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ. ಅವರ ಗುರಾಣಿಗಳು ಅವರ ಮೂಳೆಗಳ ಮೇಲೆ ಇಡಲಾದವು. ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರರಾಗಿದ್ದರೂ ಅವರ ಅಕ್ರಮಗಳು ಅವರ ಎಲುಬುಗಳ ಮೇಲೆ ಇರುವುವು.
28“ಫರೋಹನೇ, ನೀನೂ ಸುನ್ನತಿಯಿಲ್ಲದವರ ಮಧ್ಯದಲ್ಲಿ ಮುರಿಯಲಾಗುವೆ. ಖಡ್ಗದಿಂದ ಹತರಾದವರ ಸಂಗಡ ಮಲಗುವೆ.
29“ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಅದರ ಪ್ರಧಾನರೂ ಶೂರರಾಗಿದ್ದರೂ ಖಡ್ಗದಿಂದ ಹತರಾದವರ ಸಂಗಡ ಬಿದ್ದಿರುತ್ತಾರೆ; ಅವರು ಸುನ್ನತಿಯಿಲ್ಲದವರ ಸಂಗಡ ಮತ್ತು ಕುಣಿಗೆ ಇಳಿಯುವವರ ಸಂಗಡ ಹತರಾದವರು.
30“ಅಲ್ಲಿ ಉತ್ತರದ ರಾಜಕುಮಾರರೂ ಸೀದೋನ್ಯರೆಲ್ಲರೂ ಹತರಾದವರೊಂದಿಗೆ ಇಳಿದು ಅಲ್ಲಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಖಡ್ಗದಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ.
31“ಫರೋಹನು ಹಾಗೂ ಆತನ ಸೈನ್ಯವು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಜನಸಮೂಹದ ವಿಷಯವಾಗಿ ಸಮಾಧಾನ ಹೊಂದುವನು, ಫರೋಹನು ಮತ್ತು ಖಡ್ಗದಿಂದ ಹತರಾದ ಅವನ ಸಕಲ ಸೈನಿಕರೂ ಸಮಾಧಾನ ಹೊಂದುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
32ಏಕೆಂದರೆ ನಾನು ಜೀವಿತರ ದೇಶದಲ್ಲಿ ಭಯವನ್ನು ಉಂಟುಮಾಡಿದ್ದೇ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಖಡ್ಗದಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ನಡುವೆ ಸೇರಿಹೋಗುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
시편 80
Restore Us and Bring Us Back
1ಮಂದೆಯಂತೆ ಯೋಸೇಫ್ಯರನ್ನು ನಡೆಸುವ
2ಎಫ್ರಾಯೀಮ್, ಬೆನ್ಯಾಮೀನ್, ಮನಸ್ಸೆಯರ ಮುಂದೆ
3ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ.
4ಸರ್ವಶಕ್ತ ದೇವರಾಗಿರುವ ಯೆಹೋವ ದೇವರೇ,
5ರೋದನವೇ ನಮ್ಮ ಅನ್ನವಾಗುವಂತೆಯೂ
6ನಮ್ಮ ನೆರೆಯವರ ವಿವಾದಕ್ಕೆ ನಮ್ಮನ್ನು ಗುರಿಮಾಡಿದ್ದೀರಿ.
7ಸರ್ವಶಕ್ತರಾದ ದೇವರೇ, ನೀವು ನಮ್ಮನ್ನು ಪುನಃ ಸ್ಥಾಪಿಸಿರಿ.
8ನೀವು ದ್ರಾಕ್ಷಾಲತೆಯನ್ನು ಈಜಿಪ್ಟಿನಿಂದ ತಂದು,
9ಅದಕ್ಕಾಗಿ ಸ್ಥಳ ಸಿದ್ಧಮಾಡಿದಿರಿ.
10ಅದರ ನೆರಳಿನಿಂದ ಬೆಟ್ಟಗಳೂ
11ಅದು ತನ್ನ ರೆಂಬೆಗಳನ್ನು ಸಮುದ್ರದವರೆಗೂ,
12ಮಾರ್ಗದಲ್ಲಿ ಹಾದುಹೋಗುವವರೆಲ್ಲರು ಅದನ್ನು ಕೀಳುವ ಹಾಗೆ
13ಅಡವಿಯಿಂದ ಬಂದ ಹಂದಿಗಳು ಅದನ್ನು ಹಾಳು ಮಾಡುತ್ತವೆ;
14ಸೇನಾಧೀಶ್ವರ ದೇವರೇ, ನಿಮ್ಮ ದರ್ಶನವಾಗಲಿ.
15ನಿಮ್ಮ ಬಲಗೈ ನೆಟ್ಟ ಸಸಿಯನ್ನೂ
16ನಿಮ್ಮ ದ್ರಾಕ್ಷಿಬಳ್ಳಿ ಕಡಿದು ಬೆಂಕಿಯಿಂದ ಸುಡಲಾಗಿದೆ.
17ನಿಮ್ಮ ಬಲಗಡೆಯಲ್ಲಿರುವಾತನ ಮೇಲೆ ನಿಮ್ಮ ಹಸ್ತವಿರಲಿ.
18ಆಗ ನಾವು ನಿಮ್ಮಿಂದ ತೊಲಗುವುದಿಲ್ಲ.
19ಸರ್ವಶಕ್ತರಾದ ದೇವರೇ, ನೀವು ನಮ್ಮನ್ನು ಪುನಃ ಸ್ಥಾಪಿಸಿರಿ.