ಯೆಹೋವ ದೇವರು, “ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಸಾಮಾನ್ಯ ಲೇಖನಿಯಿಂದಲೇ ಮಹೇರ್ ಶಾಲಾಲ್ ಹಾಷ್ ಬಜ್, ಎಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ ಎಂದು ಬರೆ,” ಎಂಬುದಾಗಿ ನನಗೆ ಹೇಳಿದರು.
KO
Copywork
Kannada OKCV 이사야 8장
성경필사는 빠르게 끝내는 입력 훈련이 아니라, 한 절씩 말씀의 문장과 흐름을 다시 붙드는 시간입니다. 입력 내용은 이 브라우저에 임시 저장되며, 로그인하면 계정에도 저장됩니다.
소제목 단위로 진행 · 이사야
ನಾನು ಯಾಜಕನಾದ ಊರೀಯನನ್ನೂ ಯೆಬೆರೆಕ್ಯನ ಮಗನಾದ ಜೆಕರ್ಯನನ್ನೂ ನಂಬಿಗಸ್ತ ಸಾಕ್ಷಿಗಳನ್ನಾಗಿ ಇರಿಸಿಕೊಂಡೆನು.
ಅನಂತರ ನಾನು ಪ್ರವಾದಿನಿಯಾದ ನನ್ನ ಹೆಂಡತಿಯನ್ನು ಕೂಡಲು, ಆಕೆಯು ಗರ್ಭಧರಿಸಿ ಒಬ್ಬ ಗಂಡುಮಗುನ್ನು ಹೆತ್ತಳು. ಆಗ ಯೆಹೋವ ದೇವರು ನನಗೆ, “ಆ ಮಗುವಿಗೆ, ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು, ಎಂದು ಹೇಳಿದರು.
ಏಕೆಂದರೆ ಆ ಮಗುವು, ‘ಅಪ್ಪಾ’ ಅಥವಾ ‘ಅಮ್ಮಾ’ ಎಂದು ಕೂಗಬಲ್ಲವನಾಗುವುದಕ್ಕಿಂತ ಮುಂಚೆ ಅಸ್ಸೀರಿಯದ ಅರಸನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ತೆಗೆದುಕೊಂಡು ಹೋಗುವನು” ಎಂದರು.
ಯೆಹೋವ ದೇವರು ಮತ್ತೊಮ್ಮೆ ನನಗೆ,
“ಈ ಜನರು ಮೆಲ್ಲಗೆ ಹರಿಯುವ ಸಿಲೋವದ ನೀರನ್ನು ತ್ಯಜಿಸಿ,
ಯೆಹೋವ ದೇವರಾದ ನಾನು ಎಲ್ಲಾ ಪ್ರತಾಪದಿಂದ ಕೂಡಿದ
ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು
ಜನಾಂಗಗಳೇ, ನೀವು ಯುದ್ಧವನ್ನು ಘೋಷಿಸಿರಿ, ಆದರೂ ಚದರಿಹೋಗುವಿರಿ!
ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದು ಹೋಗುವುದು,
ನಾನು ಈ ಜನರ ಮಾರ್ಗದಲ್ಲಿ ನಡೆಯಬಾರದೆಂದು ಯೆಹೋವ ದೇವರು ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು ನನಗೆ,
“ಇವರು ಯಾವುದನ್ನು ಒಳಸಂಚು ಎಂದು ಹೇಳುತ್ತಾರೋ,
ಸೇನಾಧೀಶ್ವರ ಯೆಹೋವ ದೇವರನ್ನೇ ಪ್ರತಿಷ್ಠೆ ಪಡಿಸಿಕೊಳ್ಳಿರಿ;
ಅವರೇ ನಿಮಗೆ ಪರಿಶುದ್ಧ ಸ್ಥಳವಾಗಿರುವರು.
ಅವರಲ್ಲಿ ಅನೇಕರು ಎಡವಿಬೀಳುವರು,
ಸಾಕ್ಷಿಯನ್ನು ಕಟ್ಟಿಡು,
ಯಾಕೋಬಿನ ವಂಶದವರಿಗೆ ಮುಖವನ್ನು ಮರೆಮಾಡಿಕೊಂಡಿರುವ
ಇಗೋ, ನಾನೂ ಯೆಹೋವ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರಿಂದ ಉಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ.
ಲೊಚಗುಟ್ಟುವ, ಪಿಸುಮಾತಾಡುವ ಮಂತ್ರಗಾರರನ್ನೂ; ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ, ಜನರು ತಮ್ಮ ದೇವರನ್ನೇ ಹುಡುಕುವುದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವುದುಂಟೋ?
ದೇವರ ಶಿಕ್ಷಣ ಮತ್ತು ಎಚ್ಚರಿಸುವ ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಒಂದು ವೇಳೆ ಅವರು ಹೇಳದಿದ್ದರೆ, ಅವರಲ್ಲಿ ಮುಂಜಾವಿನ ಬೆಳಕು ಮೂಡಿಬರುವುದಿಲ್ಲ.
ಅವರು ಘೋರಕಷ್ಟಕ್ಕೊಳಗಾಗಿ ಹಸಿದು ದೇಶದಲ್ಲಿ ಅಲೆಯುವರು. ಅವರು ಹಸಿದಾಗ ರೇಗಿಕೊಂಡು ತಮ್ಮ ರಾಜನನ್ನೂ, ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
ಅವರು ಭೂಮಿಯನ್ನು ದೃಷ್ಟಿಸಿದರೂ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು, ಕಾರ್ಗತ್ತಲೆಗೆ ಅವರನ್ನು ದೂಡಲಾಗುವುದು.